ಆರ್‌ಜೆಡಿ ಅಧ್ಯಕ್ಷರಾಗಿ 9ನೇ ಬಾರಿ ಲಾಲೂ ಆಯ್ಕೆ

ರಾಷ್ಟ್ರೀಯ ಜನತಾ ದಳದ (ಆರ್ ಜೆ ಡಿ) ಅಧ್ಯಕ್ಷರಾಗಿ ಲಾಲೂ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಸತತ 9 ನೇ ಬಾರಿ ಲಾಲೂ ಆರ್‌ಜೆಡಿ...
ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್
ಪಟನಾ: ರಾಷ್ಟ್ರೀಯ ಜನತಾ ದಳದ (ಆರ್ ಜೆ ಡಿ) ಅಧ್ಯಕ್ಷರಾಗಿ ಲಾಲೂ ಪ್ರಸಾದ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಸತತ 9 ನೇ ಬಾರಿ ಲಾಲೂ ಆರ್‌ಜೆಡಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ಮಾತನಾಡಿದ ಲಾಲೂ, ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 
56 ಇಂಚಿನ ಎದೆಯ ಮೋದಿ, ಗಡಿ ದಾಟಿ ದೇಶದ ತಂಟೆಗೆ ಬಂದರೆ ಕಣ್ಣಿಗೆ ಕಣ್ಣು ಕೀಳುತ್ತೇವೆ ಎಂದು ಅಬ್ಬರಿಸಿದ್ದರು. ಆದರೆ ಈಗ ಪಾಕಿಸ್ತಾನದ ಉಗ್ರರು ಪಠಾಣ್ ಕೋಟ್ ಮೇಲೆ ದಾಳಿ ನಡೆಸಿ ನಮ್ಮ ಸೈನಿಕರನ್ನು ಹತ್ಯೆಗೈದಾಗ ಸುಮ್ಮನಿರುವುದು ಯಾಕೆ?. ಬಿಜೆಪಿಯ ಕೈಯಲ್ಲಿರುವ ನಮ್ಮ ದೇಶ ಸುರಕ್ಷಿತವಾಗಿಲ್ಲ. ಆದ್ದರಿಂದ ಜಾತ್ಯಾತೀತ ಪಕ್ಷಗಳೆಲ್ಲಾ ಮತ್ತೆ ಒಂದಾಗಬೇಕೆಂದು ಲಾಲೂ ಹೇಳಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಜಯಭೇರಿ ಬಾರಿಸಿ ಅಧಿಕಾರಕ್ಕೇರಿದ್ದರು. ಆದರೆ ನನ್ನ ಮತ್ತು ನಿತೀಶ್ ಕುಮಾರ್ ನಡುವಿನ ಮೈತ್ರಿಯಲ್ಲಿ ಬಿಜೆಪಿ ಹುಳಿ ಹಿಂಡಲು ಯತ್ನಿಸುತ್ತಿದೆ. ಆದರೆ ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಲಾಲೂ ನುಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com