
ಫಗ್ವಾರ: ಪಠಾಣ್ ಕೋಟ್ ದಾಳಿಯನ್ನು ಯುದ್ಧ ಪ್ರಚೋದನೆ ಎಂದು ಹೇಳಿರುವ ವಿಶ್ವ ಹಿಂದು ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ, ಯುದ್ಧ ಪ್ರಚೋದನೆಗಳಿಗೆ ರಾಜತಾಂತ್ರಿಕತೆ ಅಥವಾ ಮಾತುಕತೆ ಮೂಲಕ ಉತ್ತರ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಠಾಣ್ ಕೋಟ್ ಭಾರತೀಯ ಸೇನೆ ಮೇಲೆ ನಡೆದ ದಾಳಿ ಮಾತ್ರ ಅಲ್ಲ, ಅದು ಭಾರತದ ವಿರುದ್ಧ ನಡೆದ ಯುದ್ಧ ಪ್ರಚೋದನೆ ಎಂದು ಹೇಳಿದ್ದು, ಈ ರೀತಿಯ ಪ್ರಚೋದನೆಗಳಿಗೆ ಮಾತುಕತೆ ಅಥವಾ ರಾಜತಾಂತ್ರಿಕತೆಯಿಂದ ಸೂಕ್ತ ಉತ್ತರ ನೀಡುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ಪ್ರಮಾಣಿಕವಾಗಿಲ್ಲ, ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ನನ್ನು ಭಾರತಕ್ಕೆ ಒಪ್ಪಿಸಿಲ್ಲ, ಈ ಎಲ್ಲಾ ಉಗ್ರರನ್ನು ನಿಯಂತ್ರಿಸುವುದು ಪಾಕಿಸ್ತಾನಕ್ಕೆ ಬೇಕಿಲ್ಲ, ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ಮಾತ್ರ ನಾವು ಉತ್ತರ ನೀಡಬೇಕು ಎಂದು ತೊಗಾಡಿಯಾ ಅಭಿಪ್ರಾಯಪಟ್ಟಿದ್ದಾರೆ.
Advertisement