ಪಶ್ಚಿಮ ಬಂಗಾಳದಲ್ಲಿ ನಕಲಿ ನೋಟು ಸಾಗಾಣಿಕೆ ಮಾಡುತ್ತಿದ್ದ ಬಾಂಗ್ಲಾ ಪ್ರಜೆ ಬಂಧನ

ಭಾರತೀಯ ನಕಲಿ ನೋಟುಗಳನ್ನು ಸಾಗಣೆ ಮಾಡುತ್ತಿದ್ದ ಬಾಂಗ್ಲಾ ಪ್ರಜೆಯೊಬ್ಬನನ್ನು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕಾಲಿಯಾಚಾಕ್ ನಲ್ಲಿ ಬಂಧಿಸಲಾಗಿದೆ.
ನಕಲಿ ನೋಟು (ಸಾಂದರ್ಭಿಕ ಚಿತ್ರ)
ನಕಲಿ ನೋಟು (ಸಾಂದರ್ಭಿಕ ಚಿತ್ರ)

ಕೋಲ್ಕತ್ತಾ: ಭಾರತೀಯ ನಕಲಿ ನೋಟುಗಳನ್ನು ಸಾಗಣೆ ಮಾಡುತ್ತಿದ್ದ ಬಾಂಗ್ಲಾ ಪ್ರಜೆಯೊಬ್ಬನನ್ನು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕಾಲಿಯಾಚಾಕ್ ನಲ್ಲಿ ಬಂಧಿಸಲಾಗಿದೆ.
ಬಂಧಿತ ಬಾಂಗ್ಲಾ ಪ್ರಜೆ 8 ಲಕ್ಷ ರೂ ಮೊತ್ತದ ಕಳ್ಳ ನೋಟುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಂ.32 ರ ಬಳಿ ಇರುವ ಕಾಲಿಯಾಚಕ್ ಮಾರ್ಕೆಟ್ ನಲ್ಲಿ ನಕಲಿ ನೋಟು ಚಲಾವಣೆಗೆ ಯತ್ನಿಸುತ್ತಿದ್ದಾಗ ಅನ್ವರುಲ್ ಇಸ್ಲಾಂ ನನ್ನು ಗಡಿ ಭದ್ರತಾ ಪಡೆಯ ಅಧಿಕಾರಿಗಳು ಬಂಧಿಸಿದ್ದಾರೆ.  
1 ,000 ರೂಪಾಯಿ ಮುಖಬೆಲೆಯ 400 ನಕಲಿ ನೋಟು, 500 ರೂಪಾಯಿ ಮುಖಬೆಲೆಯ 800 ನಕಲಿ ನೋಟುಗಳನ್ನು ಈತ ಸಾಗಾಣಿಕೆ ಮಾಡುತ್ತಿದ್ದ. ನಕಲಿ ನೋಟುಗಳ ಜೊತೆ ಬಂಧಿತನಿಂದ 2 ಮೊಬೈಲ್ ಫೋನು, ಒಂದು ಪಾಸ್ ಪೋರ್ಟ್ ನ್ನು ವಶಪಡಿಸಿಕೊಳ್ಳಲಾಗಿದ್ದು ಬಿಎಸ್ ಎಫ್ ಯೋಧರು ಬಂಧಿತನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com