ಸೆಕ್ಯೂರಿಟಿ ಗಾರ್ಡ್ ಚಂದ್ರಬೋಸ್ ಹತ್ಯೆ: ಉದ್ಯಮಿ ಮೊಹಮ್ಮದ್ ನಿಶಾಂ ತಪ್ಪಿತಸ್ಥ

ಕಳೆದ ಜನವರಿ 29ರಂದು ಗೇಟ್ ತೆಗೆಯಲು ತಡಮಾಡಿದ ಕಾವಲುಗಾರ ಚಂದ್ರಬೋಸ್ ನನ್ನು ತನ್ನ ಹಮ್ಮರ್ ಕಾರು ಗುದ್ದಿಸಿ ಸಾಯಿಸಿದ ಉದ್ಯಮಿ ಮೊಹಮ್ಮದ್...
ಮೊಹಮ್ಮದ್ ನಿಶಾಂ
ಮೊಹಮ್ಮದ್ ನಿಶಾಂ

ತೃಶ್ಯೂರ್: ಕಳೆದ ಜನವರಿ 29ರಂದು ಗೇಟ್ ತೆಗೆಯಲು ತಡಮಾಡಿದ ಕಾವಲುಗಾರ ಚಂದ್ರಬೋಸ್ ನನ್ನು ತನ್ನ ಹಮ್ಮರ್ ಕಾರು ಗುದ್ದಿಸಿ ಸಾಯಿಸಿದ ಉದ್ಯಮಿ ಮೊಹಮ್ಮದ್ ನಿಶಾಂ ಆರೋಪ ಸಾಬೀತಾಗಿದೆ.

ಚಂದ್ರಬೋಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ಕೋರ್ಟ್ ಐಪಿಸಿ ಸೆಕ್ಷನ್ 302(ಕೊಲೆ). 326(ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರ ಮೂಲಕ ಹಲ್ಲೆ) ಹಾಗೂ 427 ಅಡಿಯಲ್ಲಿ ಆರೋಪ ಸಾಬೀತಾಗಿದ್ದು, ಕೋರ್ಟ್ ನಿಶಾಂ ತಪ್ಪಿತಸ್ತನೆಂದು ಹೇಳಿದ್ದು, ನಾಳೆ ಶಿಕ್ಷೆಯ ಪ್ರಮಾಣ ಘೋಷಿಸಲಿದೆ.

ಅಪರಾಧಿಗೆ ಮರಣ ದಂಡನೆ ಹಾಗೂ ಮೃತ ಚಂದ್ರಬೋಸ್ ಕುಟುಂಬಕ್ಕೆ 5 ಕೋಟಿ ಪರಿಹಾರ ನೀಡುವಂತೆ ಆದೇಶಿಸಬೇಕು ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಪಿ ಉದಯಭಾನು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com