ಜಮ್‌ಷೆಡ್ಪುರ: ಪತ್ನಿ ಕೊಲೆಗೆ ಪ್ರತೀಕಾರವಾಗಿ ವ್ಯಕ್ತಿಯೊಬ್ಬ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಘಟನೆ ಇಲ್ಲಿಂದ 25 ಕಿ.ಮೀ ದೂರದ ಚಟ್ಟನಿಯಲ್ಲಿ ನಡೆದಿದೆ.
ಬಾಸ್ಕೊ ತುಡು ಎಂಬ ವ್ಯಕ್ತಿ, ತನ್ನ ಪತ್ನಿಯ ಕೊಲೆ ಆರೋಪಿ ಭೈರೊ ಅವರ ಹಿರಿಯ ಸಹೋದರರಾದ ತಪಾ(35), ರಮೇಶ್(28), ರಮೇಶ್ ಪತ್ನಿ ಹಾಗೂ ಅವರ ಸೋಹದರಿ ಸೋನಿಯಾ ತುಡು(20)ರನ್ನು ಹತ್ಯೆ ಮಾಡಿದ್ದಾನೆ ಎಂದು ಡಿಎಸ್‌ಪಿ ಅಜಿತ್ ವಿಮಲ್ ಅವರು ತಿಳಿಸಿದ್ದಾರೆ.
ನಾಲ್ವರನ್ನು ಹತ್ಯೆ ಮಾಡಿದ ಬಳಿ ಬಾಸ್ಕೊ ಗ್ರಾಮದ ಪ್ರಧಾನನ ಬಳಿ ಶರಣಾಗಿದ್ದು, ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜನವರಿ 15ರಂದು ಪೂರ್ವ ಸಿಂಗ್ಬುಮ್ ಜಿಲ್ಲೆಯ ಪತರ್ದಂಗ್‌ನಲ್ಲಿ ವಾಮಚಾರ ನಡೆಸುತ್ತಿದ್ದಾರೆ ಎಂಬ ಅನುಮಾನ ಮೇಲೆ ಬಾಸ್ಕೊನ 45 ವರ್ಷದ ಪತ್ನಿ ಬಾಲಿಯನ್ನು ಬೈರೋ ಹತ್ಯೆ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಭೈರೊನನ್ನು ಬಂಧಿಸಲಾಗಿದ್ದು, ಆರೋಪಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.