
ಹೈದರಾಬಾದ್: ಸಂಶೊಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ,ದಲಿತ ಸಮುದಾಯಕ್ಕೆ ಸೇರಿದ 10 ಪ್ರೊಫೆಸರ್‌ಗಳು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯತ್ಯಕ್ಕೆ ರಾಜೀನಾಮೆ ನೀಡಿದ್ದಾರೆ.
ರೋಹಿತ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿದ್ದು, ಪ್ರೊಫೆಸರ್‌ಗಳು ಸಹ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಸತ್ಯವನ್ನು ಮರೆ ಮಾಚುತ್ತಿದ್ದಾರೆ ಎಂದು ಪ್ರೊಫೆಸರ್‌ಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಅವರು "ಸೃಷ್ಟಿ ಸಿರುವ ಹೇಳಿಕೆ'ಯನ್ನು ವಿರೋಧಿಸಿ ಈ ಪ್ರೊಫೆಸರ್‌ಗಳು ರಾಜೀನಾಮೆ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.
ರೋಹಿತ್ನನ್ನು ಅಮಾನತು ಮಾಡಿದ ಸಮಿತಿಯಲ್ಲಿ ದಲಿತ ಪ್ರೊಫೆಸರ್ ಸಹ ಇದ್ದರು ಎಂಬ ಸಚಿವರ ಹೇಳಿಕೆಯನ್ನು ವಿಶ್ವವಿದ್ಯಾಲಯದ ಎಸ್ಸಿ/ಎಸ್ಸಿ ಟೀಚರ್ಸ್ ಮತ್ತು ಆಫೀಸರ್ಸ್ ಫೋರಮ್ ನಿರಾಕರಿಸಿದೆ. ಮೇಲ್ವರ್ಗದ ಪ್ರೊಫೆಸರ್ ಒಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ದಲಿತರು ಯಾರೂ ಇರಲಿಲ್ಲ ಎಂದು ತಿಳಿಸಿದೆ.
ನಮ್ಮ ವಿದ್ಯಾರ್ಥಿಗಳ ವಿರುದ್ಧ ಹೂಡಲಾಗಿರುವ ಪೊಲೀಸ್ ಕೇಸುಗಳನ್ನು ಹಾಗೂ ವಿದ್ಯಾರ್ಥಿಗಳ ಮೇಲಿನ ಅಮಾನತು ಆದೇಶವನ್ನು ತತ್‌ಕ್ಷಣವೇ ಹಿಂಪಡೆಯಬೇಕೆಂದು ನಾವು ಆಗ್ರಹಿಸುತ್ತೇವೆ' ಎಂದು ಪ್ರೊಫೆಸರ್‌ಗಳು ಒತ್ತಾಯಿಸಿದ್ದಾರೆ.
Advertisement