
ಬೆಂಗಳೂರು: ಪ್ರತಿ ತಿಂಗಳು ಪಿಎಫ್ ಹಣ ಪಾವತಿ ಮಾಡಲು ನೀಡಲಾಗುತ್ತಿದ್ದ 5 ದಿನಗಳ ಹೆಚ್ಚುವರಿ ಕಾಲಮಿತಿ (ಗ್ರೇಸ್ ಪಿರಿಯಡ್)ಯನ್ನು ರದ್ದುಗೊಳಿಸಲಾಗಿದೆ.
ನೌಕರರ ವೆತನಕ್ಕನುಗುಣವಾಗಿ ಪಿಎಫ್ ನ್ನು ಕಡಿತಗೊಳಿಸುವ ಹಾಗೂ ಇಪಿಎಫ್ ಅರ್ಹತೆಯನ್ನು ಗುರುತಿಸುವ ವ್ಯವಸ್ಥೆಯನ್ನು ಗಣಕೀಕೃತಗೊಳಿಸಲಾಗಿದ್ದು ಈ ಎಲ್ಲಾ ಪ್ರಕ್ರಿಯೆಗೆ ಅಗತ್ಯವಿದ್ದ ಸಮಯವೂ ಉಳಿತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ನೌಕರರ ಪಿಎಫ್ ಪಾವತಿ ಮಾಡುವ ಸಂಸ್ಥೆಗೆ ನೀಡಲಾಗುತ್ತಿದ್ದ 5 ದಿನಗಳ ಹೆಚ್ಚುವರಿ ಕಾಲಮಿತಿಯನ್ನು ತೆಗೆದುಹಾಕಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ವರೆಗೆ ಪ್ರತಿ ನೌಕರನ ವೇತನಕ್ಕೆ ಅನುಗುಣವಾಗಿ ಕಡಿತಗೊಳ್ಳುತ್ತಿದ್ದ ಪಿಎಫ್ ಮೊತ್ತ ಹಾಗೂ ಇನ್ನಿತರ ಪ್ರಕ್ರಿಯೆಗಳನ್ನು ಯಾಂತ್ರಿಕ ಸಹಾಯವಿಲ್ಲದೆ ಕೈಯ್ಯಾರೆ ಮಾಡಲಾಗುತ್ತಿತ್ತಾದರಿಂದ ಹೆಚ್ಚು ಸಮಯ ಅಗತ್ಯವಿತ್ತು. ಆದ್ದರಿಂದ ಪಿಎಫ್ ಪಾವತಿ ಮಾಡುವುದಕ್ಕೆ ಪ್ರತಿ ತಿಂಗಳ 15 ನೇ ತಾರೀಕಿನೊಂದಿಗೆ 5 ದಿನಗಳ ಹೆಚ್ಚುವರಿ ಕಾಲಮಿತಿಯನ್ನು ನೀಡಲಾಗುತ್ತಿತ್ತು. ಹೊಸ ಆದೇಶ ಫೆ.1 ರಿಂದ ಜಾರಿಗೆ ಬರಲಿದ್ದು ಇನ್ನು ಮುಂದೆ 15 ರೊಳಗೆ ಪಿಎಫ್ ಪಾವತಿ ಮಾಡಬೇಕಾಗುತ್ತದೆ.
Advertisement