ಪಶ್ಚಿಮ ಬಂಗಾಳದಲ್ಲಿ ಕಚ್ಚ ಬಾಂಬ್ ಸ್ಫೋಟ, ಇಬ್ಬರ ಸಾವು

ಪಶ್ಚಿಮ ಬಂಗಾಳದ ಬೀರಭೂಮ್‌ ಜಿಲ್ಲೆಯಲ್ಲಿ ಶುಕ್ರವಾರ ಕಚ್ಚಾ ಬಾಂಬುಗಳನ್ನು ತಯಾರಿಸುತ್ತಿದ್ದ ವೇಳೆ ಉಂಟಾದ ಭೀಕರ ನ್ಪೋಟದಲ್ಲಿ ಇಬ್ಬರು ವ್ಯಕ್ತಿಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ: ಪಶ್ಚಿಮ ಬಂಗಾಳದ ಬೀರಭೂಮ್‌ ಜಿಲ್ಲೆಯಲ್ಲಿ ಶುಕ್ರವಾರ ಕಚ್ಚಾ ಬಾಂಬುಗಳನ್ನು ತಯಾರಿಸುತ್ತಿದ್ದ ವೇಳೆ ಉಂಟಾದ ಭೀಕರ ನ್ಪೋಟದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬೀರಭೂಮ್‌ ಜಿಲ್ಲೆಯ ದುಬ್ರಜಪುರದಲ್ಲಿ ಗುರುವಾರ ಮಧ್ಯರಾತ್ರಿ ಹೊತ್ತಿಗೆ ನಡೆದ ಸ್ಫೋಟ ಸ್ಥಳದಲ್ಲಿ ಪೊಲೀಸರು ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದೊಂದು ವರ್ಷದಿಂದ ಪಶ್ಚಿಮ ಬಂಗಾಳವು ಭದ್ರತಾ ಪಡೆಗಳ ತೀವ್ರ ನಿಗಾಕ್ಕೆ ಒಳಪಟ್ಟಿದೆ. ಪಶ್ಚಿಮ ಬಂಗಾಳವು ಪಾಕಿಸ್ಥಾನದ ಐಎಸ್‌ಐ ನ ಏಜೆಂಟ್‌ಗಳ ಸುರಕ್ಷಿತ ಅಡಗುದಾಣವಾಗಿದೆ ಎಂಬ ಶಂಕೆಯೇ ಇದಕ್ಕೆ ಕಾರಣವಾಗಿದೆ.

ಜಮಾತ್‌ ಅಲ್‌ ಮುಜಾಹಿದೀನ್‌ ಬಾಂಗ್ಲಾದೇಶ ರೀತಿಯ ಉಗ್ರ ಸಂಘಟನೆಗಳು ಹೌರಾ, ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮಾತ್ರವಲ್ಲದೆ ಮುರ್ಷಿದಾಬಾದ್‌, ನಾದಿಯಾ, ಬದ್ವಾನ್‌ ಮತ್ತು ಭೀರಭೂಮ್‌ ಜಿಲ್ಲೆಗಳಲ್ಲಿ ತಮ್ಮ ಸಂಘಟನಾ ನೆಲೆಗಳನ್ನು ಹರಡಿಕೊಂಡಿರುವುದಾಗಿ ಶಂಕಿಸಲಾಗಿದೆ. 2014ರ ಅಕ್ಟೋಬರ್ 2 ರಂದು ಬುರ್ದ್ವಾನ್ ಜಿಲ್ಲೆಯಲ್ಲೂ ಸ್ಫೋಟ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com