ರಫೆಲ್ ಜೆಟ್ ಒಪ್ಪಂದ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ: ಫ್ರಾಂಕೋಯಿಸ್ ಹಾಲ್ಲೆಂಡ್

ಗಣರಾಜ್ಯೋತ್ಸವದ ದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಮೆರವಣಿಗೆ ಮುಖ್ಯ ಆಕರ್ಷಣೆ. ದೆಹಲಿಯ ರಾಷ್ಟ್ರಪತಿ ಭವನದಿಂದ ಆರಂಭಿಸಿ ರಾಜಪಥ ಮಾರ್ಗವಾಗಿ ಇಂಡಿಯಾ ಗೇಟ್...
ರಫೆಲ್ ಜೆಟ್ ನ ಸಂಗ್ರಹ ಚಿತ್ರ
ರಫೆಲ್ ಜೆಟ್ ನ ಸಂಗ್ರಹ ಚಿತ್ರ

ನವದೆಹಲಿ: ಗಣರಾಜ್ಯೋತ್ಸವದ ದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಮೆರವಣಿಗೆ ಮುಖ್ಯ ಆಕರ್ಷಣೆ. ದೆಹಲಿಯ ರಾಷ್ಟ್ರಪತಿ ಭವನದಿಂದ ಆರಂಭಿಸಿ ರಾಜಪಥ ಮಾರ್ಗವಾಗಿ ಇಂಡಿಯಾ ಗೇಟ್ ಹಾದು ಹೋಗುತ್ತದೆ ಈ ಪಥಸಂಚಲನ. ಇಲ್ಲಿ ನಮ್ಮ ದೇಶದ ರಕ್ಷಣಾ ಇಲಾಖೆ, ಮಿಲಿಟರಿ ಶಕ್ತಿ ಪ್ರದರ್ಶನ, ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿಧ್ಯತೆಗಳ ಪ್ರದರ್ಶನವಿರುತ್ತದೆ.

ಈ ಕಾರ್ಯಕ್ರಮಕ್ಕೆ ಪ್ರತಿವರ್ಷ ಕೇಂದ್ರ ಸರ್ಕಾರ ಒಬ್ಬ ವಿದೇಶಿ ಗಣ್ಯರನ್ನು ಆಹ್ವಾನಿಸುತ್ತದೆ. ಈ ವರ್ಷ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವವರು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲೆಂಡ್.  ಅವರು ಇಂದು ಚಂಡೀಗಢಕ್ಕೆ ಆಗಮಿಸಲಿದ್ದು, ಅವರನ್ನು ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಳ್ಳಲಿದ್ದಾರೆ. ಭಾರತ ಭೇಟಿ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಫ್ರಾಂಕೋಯಿಸ್, ಭಾರತದೊಂದಿಗೆ ಮಾಡಿಕೊಂಡಿರುವ ರಫೆಲ್ ಜೆಟ್ ಯುದ್ಧ ವಿಮಾನ ಒಪ್ಪಂದ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ಅದರ ತಾಂತ್ರಿಕ ಕೆಲಸಗಳಿಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಫ್ರಾನ್ಸ್ ಪ್ರಧಾನಿ ಏನು ಹೇಳಿದ್ದಾರೆ, ಭಾರತ ಫ್ರಾನ್ಸ್ ನಡುವೆ ನಡೆದ ಒಪ್ಪಂದವೇನು ನೋಡೋಣ ಬನ್ನಿ:
1. ರಫೆಲ್ ಜೆಟ್ ಒಪ್ಪಂದದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲ್ಲೆಂಡ್ ನಾಳೆ ಮಾತುಕತೆ ನಡೆಸಲಿದ್ದಾರೆ. ಭಾರತದ ಮಿಲಿಟರಿಯನ್ನು ಆಧುನೀಕರಣಗೊಳಿಸಲು 150 ಶತಕೋಟಿ ಡಾಲರ್ ಮೊತ್ತದ ಒಪ್ಪಂದವನ್ನು ಉಭಯ ದೇಶಗಳು ಮಾಡಿಕೊಂಡಿವೆ. ಕಳೆದ ವರ್ಷ ಪ್ರಧಾನಿ ಮೋದಿಯವರು ಫ್ರಾನ್ಸ್ ದೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಡಿಕೊಂಡಿದ್ದ ಒಪ್ಪಂದ ಇದಾಗಿತ್ತು. ಚೀನಾ ಮತ್ತು ಪಾಕಿಸ್ತಾನವನ್ನು ಎದುರಿಸಲು ಯುದ್ಧ ವಿಮಾನದ ಅಗತ್ಯವಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

2.ಭಾರತಕ್ಕೆ ಫ್ರಾನ್ಸ್ ಪೂರೈಕೆ ಮಾಡುತ್ತಿರುವ 36 ಜೆಟ್ ವಿಮಾನಗಳ ಬೆಲೆಯನ್ನು ಕಡಿಮೆ ಮಾಡಬೇಕೆಂದು ವಾಯುಪಡೆ ಒತ್ತಾಯಿಸುತ್ತಾ ಬಂದಿದೆ.

3. ಇಂದು ಚಂಡೀಗಢಕ್ಕೆ ಆಗಮಿಸಲಿರುವ ಹಾಲ್ಲೆಂಡ್, ಮೋದಿಯವರೊಂದಿಗೆ ವಾಣಿಜ್ಯ ಸಭೆಯಲ್ಲಿ ಭಾಗವಹಿಸಿದ ನಂತರ ಸುಂದರ ನಗರಿ ಚಂಡೀಗಢವನ್ನು ವೀಕ್ಷಿಸಲಿದ್ದಾರೆ.

4. ಪಂಜಾಬ್, ಹರ್ಯಾಣಗಳಿಂದ ಅರೆ ಮಿಲಿಟರಿ ಪಡೆಗಳನ್ನು  ಚಂಡೀಗಢದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಐಸಿಸ್ ಉಗ್ರರ ಬೆದರಿಕೆ ಪತ್ರ ಬಂದಿರುವುದರಿಂದ ದೇಶದೆಲ್ಲೆಡೆ ಉಗ್ರಗಾಮಿಗಳ ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

5.  ಚಂಡೀಗಢ ನಗರದ ನಿರ್ಮಾತೃ ಫ್ರೆಂಚಿನ ವಾಸ್ತುಶಿಲ್ಪಿ ಲಿ ಕೋರ್ಬಸಿಯರ್. 60 ವರ್ಷಗಳ ಹಿಂದೆ ಈ ನಗರವನ್ನು ನಿರ್ಮಿಸಲಾಯಿತು.

6.ಈ ಬಾರಿಯ ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಫ್ರಾನ್ಸ್ ನ ಸೈನಿಕರು ಭಾರತೀಯ ಸೇನಾ ಯೋಧರೊಂದಿಗೆ ರಾಜಪಥದಲ್ಲಿ ಪಥಸಂಚನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com