ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಯಟ್ನಾಂನ ಪವಿತ್ರ ಆಮೆ ಸಾವು

ವಿಯೇಟ್ನಾಂನ ಸ್ವಾತಂತ್ರ್ಯ ಮತ್ತು ದೀರ್ಘಾಯುಷ್ಯದ ಪಾರಂಪರಿಕ ಸಂಕೇತ ಎಂದೇ ಕರೆಸಿಕೊಳ್ಳುತ್ತಿದ್ದ, ರಾಜಧಾನಿ...

ಹನೋಯ್: ವಿಯೇಟ್ನಾಂನ ಸ್ವಾತಂತ್ರ್ಯ ಮತ್ತು ದೀರ್ಘಾಯುಷ್ಯದ ಪಾರಂಪರಿಕ ಸಂಕೇತ ಎಂದೇ ಕರೆಸಿಕೊಳ್ಳುತ್ತಿದ್ದ, ರಾಜಧಾನಿ ಹನೋಯ್ ನ ಕೆರಯೊಂದರಲ್ಲಿ ಜೀವಿಸುತ್ತಿದ್ದ ಪವಿತ್ರ ಆಮೆ "ಸಿರುವ" ಮೃತಪಟ್ಟಿದೆ ಎಂದು ಅಲ್ಲಿನ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಆಮೆ ತಾತ" ಎಂದೇ ಕರೆಯಲಾಗುತ್ತಿದ್ದ ಆಮೆ 360 ಕೆಜಿ ತೂಕ ಹೊಂದಿತ್ತು. ವಯೋಸಹಜ ಕಾರಣಗಳಿಂದ ಅದು ಮೃತಪಟ್ಟಿದೆ ಎನ್ನಲಾಗಿದೆ. ಅದರ ಆಯಸ್ಸು ಎಷ್ಟೆಂದು ಈವರೆಗ ಸೂಕ್ತ ನಿರ್ಧಾರಕ್ಕೆ ಬರಲಾಗಿಲ್ಲ.

ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳು ಗಾಢವಾಗಿ ಬೇರೂರಿರುವ ವಿಯಟ್ನಾಂಗೆ ಪವಿತ್ರ ಆಮೆಯ ಸಾವು ದುಃಖ ತರಿಸಿದ್ದು ಜನರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಆಮೆ ಸಾವು ಅಪಶಕುನ ಎಂದೇ ಚರ್ಚೆಯಾಗುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com