ಫೈರಿಂಗ್ ಆದೇಶ ನೋವಿನ ನಿರ್ಧಾರ ಎಂದರೆ ಸಾಲದು ಕ್ಷಮೆ ಯಾಚಿಸಿ: ಮುಲಾಯಂ ಗೆ ಬಿಜೆಪಿ ಆಗ್ರಹ

1990 ರಲ್ಲಿ ಕರಸೇವಕರ ಮೇಲೆ ಫಿರಿಂಗ್ ಗೆ ಆದೇಶ ನೀಡಿದ್ದು ನೋವಿನ ನಿರ್ಧಾರ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಮುಲಾಯಂ ಸಿಂಗ್ ಯಾದವ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ.
ವಿಜಯ್ ಬಹದ್ದೂರ್ ಪಾಠಕ್
ವಿಜಯ್ ಬಹದ್ದೂರ್ ಪಾಠಕ್

ನವದೆಹಲಿ: 1990 ರಲ್ಲಿ  ಕರಸೇವಕರ ಮೇಲೆ ಫೈರಿಂಗ್ ಗೆ ಆದೇಶ ನೀಡಿದ್ದು ನೋವಿನ ನಿರ್ಧಾರ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಮುಲಾಯಂ ಸಿಂಗ್ ಯಾದವ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ.

ಮುಲಾಯಂ ಸಿಂಗ್ ಯಾದವ್ ಅವರು ಗುಂಡಿಕ್ಕಲು ಆದೇಶಿಸಿದ ಕರಸೇವಕರ ಕೈಯಲ್ಲಿ ಯಾವುದೇ ಆಯುಧಗಳಿರಲಿಲ್ಲ ಆದರೂ ಮುಲಾಯಂ ಸಿಂಗ್ ಯಾದವ್ ಫೈರಿಂಗ್ ಗೆ ಆದೇಶ ನೀಡಿದ್ದರು. ಕರಸೇವಕರ ಮೇಲೆ ಗುಂಡಿನ ದಾಳಿ ನಡೆಸಿದ್ದು ಘೋರ ಅಪರಾಧ. ಫೈರಿಂಗ್ ಗೆ ಆದೇಶ ನೀಡಿದ್ದು ನೋವಿನ ನಿರ್ಧಾರ ಎಂದು ಹೇಳಿದರೆ ಸಾಲದು ಈ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ವಕ್ತಾರ ವಿಜಯ್ ಬಹದ್ದೂರ್ ಪಾಠಕ್ ಹೇಳಿದ್ದಾರೆ.

ಕರಸೇವಕರು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲು ಮುಂದಾದ ವೇಳೆಯಲ್ಲೇ ಗುಂಡಿಕ್ಕಲು ಆದೇಶಿಸಲಾಗಿದೆ. 25 ವರ್ಷಗಳ ನಂತರ ನೋವಿನ ನಿರ್ಧಾರ ಎಂದು ಹೇಳಿದರೆ ಮಾಡಿದವರ ಕುಟುಂಬದ ದುಃಖ ಕಡಿಮೆಯಾಗುವುದಿಲ್ಲ ಎಂದು ಪಾಠಕ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com