ಕಂತಿನಲ್ಲಿ ಎಲ್ ಪಿಜಿ ಸಂಪರ್ಕ

ಹೊಸ ಅಡುಗೆ ಅನಿಲ ಸಂಪರ್ಕ ಬೇಕಿದ್ದರೆ ಇನ್ನು ಕಂತುಗಳಲ್ಲಿ(ಇಎಂಐ) ಸಿಗಲಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಘೋಷಣೆ ಮಾಡಿದ್ದಾರೆ...
ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್

ಮುಂಬೈ: ಹೊಸ ಅಡುಗೆ ಅನಿಲ ಸಂಪರ್ಕ ಬೇಕಿದ್ದರೆ ಇನ್ನು ಕಂತುಗಳಲ್ಲಿ(ಇಎಂಐ) ಸಿಗಲಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಘೋಷಣೆ ಮಾಡಿದ್ದಾರೆ.

ಇದುವರಗೆ ಗೃಹೋಪಯೋಗಿ ವಸ್ತುಗಳು ಇಂಥ ವ್ಯವಸ್ಥೆಯಲ್ಲಿ ಸಿಗುತ್ತಿದ್ದವು. ಅದೇ ಮಾದರಿಯನ್ನು ಅಡುಗೆ ಅನಿಲ ಸಂಪರ್ಕಕ್ಕೂ ವಿಸ್ತರಿಸಲಾಗುತ್ತದೆ ಎಂದಿದ್ದಾರೆ. ಸದ್ಯ ಹೊಸ ಸಂಪರ್ಕಕ್ಕೆ ರು. 3,400 ಆಗುತ್ತದೆ. ಅದನ್ನು 12 ತಿಂಗಳ ಕಾಲ ಕಂತು ಪಾವತಿ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ.

ತೈಲೋತ್ಪಾದಕ ಕಂಪನಿಗಳು ಈ ಬಗ್ಗೆ ಬ್ಯಾಂಕ್ ಗಳ ಜತೆ ಮಾತುಕತೆ ನಡೆಸಲಿವೆ ಎಂದಿದ್ದಾರೆ. ಮುಂದಿನ 3 ವರ್ಷಗಳಲ್ಲಿ 10 ಕೋಟಿ ಹೊಸ ಅಡುಗೆ ಅನಿಲ ಸಂಪರ್ಕ ನೀಡುವ ಗುರಿ ಹಾಕಲಾಗಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com