67 ನೇ ಗಣರಾಜ್ಯೋತ್ಸವ: ರಾಷ್ಟ್ರಪತಿಗಳಿಂದ ಧ್ವಜಾರೋಹಣ

ದೇಶಾದ್ಯಂತ 67 ನೇ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದ್ದು ರಾಷ್ಟ್ರ ರಾಜಧಾನಿ ನವದೆಯಲಿಯ ರಾಜ್ ಪಥ್ ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಧ್ವಜಾರೋಹಣ ಮಾಡಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಧ್ವಜಾರೋಹಣ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಧ್ವಜಾರೋಹಣ

ನವದೆಹಲಿ: ದೇಶಾದ್ಯಂತ 67 ನೇ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದ್ದು ರಾಷ್ಟ್ರ ರಾಜಧಾನಿ ನವದೆಯಲಿಯ ರಾಜ್ ಪಥ್ ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಧ್ವಜಾರೋಹಣ ಮಾಡಿದ್ದಾರೆ.

ಗಣರಾಜ್ಯೋತ್ಸವದ ಮುಖ್ಯ ಆಕರ್ಷಣೆಯಾಗಿರುವ ಸೇನೆಯ ಪಥಸಂಚಲನ ಆರಂಭಗೊಂಡಿದ್ದು, ತ್ರಿವರ್ಣ ಧ್ವಜ ಹೊತ್ತ ವಾಯುಸೇನೆ ವಿಮಾನಗಳು ಪುಷ್ಪ ವೃಷ್ಟಿ ಮಾಡುವ ಮೂಲಕ ಪರೇಡ್ ಗೆ ಚಾಲನೆ ನೀಡಲಾಯಿತು.

ಲೆಫ್ಟಿನೆಂಟ್ ಜನರಲ್  ರಾಜನ್ ರವೀಂದ್ರನ್ ನೇತೃತ್ವದಲ್ಲಿ ಪರಮವೀರ ಚಕ್ರ ಪುರಸ್ಕೃತರು ಪರೇಡ್ ನಲ್ಲಿ ಭಾಗಿಯಾಗಿದ್ದಾರೆ.  1956 ರ ನಂತರ ಪರೇಡ್ ನಲ್ಲಿ  ಮೊದಲ ಬಾರಿಗೆ ಫ್ರೆಂಚ್ ಸೇನೆ ಸಹ ಪಾಲ್ಗೊಂಡಿದ್ದು, ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಅವರು ಭಾಗವಹಿಸಿದ್ದಾರೆ.

ಹುತಾತ್ಮ ಯೋಧರಿಗೆ ನಮನ: ಪರೇಡ್ ಗೆ ಚಾಲನೆ ನೀಡುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್  ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com