ರೋಹಿತ್ ವೇಮುಲಾ
ದೇಶ
ದಲಿತ ವಿದ್ಯಾರ್ಥಿ ಆತ್ಮಹತ್ಯೆ: ಎಸ್‌ಸಿ/ಎಸ್‌ಟಿ ಶಿಕ್ಷಕರಿಂದ ಅಮರಣಾಂತ ಉಪವಾಸ
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಮತ್ತಷ್ಟು ತೀವ್ರತೆ...
ಹೈದರಾಬಾದ್: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಮತ್ತಷ್ಟು ತೀವ್ರತೆ ಪಡೆದುಕೊಳ್ಳುತ್ತಿದ್ದು, ಇದೀಗ ವಿವಿಯ ಎಸ್‌ಸಿ/ಎಸ್‌ಟಿ ಶಿಕ್ಷಕರ ವೇದಿಕೆ ಕುಲಪತಿ ಅಪ್ಪಾ ರಾವ್ ಅವರ ರಾಜಿನಾಮೆಗೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ವಿಪಿನ್ ಶ್ರೀವಾಸ್ತವ ಅವರನ್ನು ಮಧ್ಯಂತರ ಕುಲಪತಿಯಾಗಿ ನೇಮಕ ಮಾಡಿರುವ ಬಗ್ಗೆಯೂ ಆಘಾತ ವ್ಯಕ್ತಪಡಿಸಿರುವ ಎಸ್‌ಸಿ/ಎಸ್‌ಟಿ ವೇದಿಕೆ, ಕಾರ್ಯಕಾರಿ ಪರಿಷತ್‌ನ ಉಪ ಸಮಿತಿಯ ಮುಖ್ಯಸ್ಥರಾಗಿದ್ದ ಶ್ರೀವಾಸ್ತವ ಅವರೇ ರೋಹಿತ್ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದೆ. ಅಲ್ಲದೆ ಶ್ರೀವಾಸ್ತವ ಅವರು ಈ ಹಿಂದೆ 2008ರಲ್ಲಿ ಮತ್ತೊಬ್ಬ ದಲಿತ ವಿದ್ಯಾರ್ಥಿ ಸೆಂತಿಲ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಿದೆ.
ಈ ಮುಂಚೆ ರೋಹಿತ್ ಆತ್ಮಹತ್ಯೆ ಪ್ರಕರಣ ಸಂಬಂಧ ವಿವಿ 11 ಪ್ರಾಧ್ಯಾಪಕರು ತಮ್ಮ ಆಡಳಿತಾತ್ಮಕ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ