
ತ್ರಿಪುರಾ: ಯಾವುದೇ ಅಡಚಣೆಗಳಿಲ್ಲದೇ ದೇಶಾದ್ಯಂತ 67 ನೇ ಗಣ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಆದರೆ ಗಣರಾಜ್ಯೋತ್ಸವ ದಿನದಂದು ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿ ಮಣಿಪುರದ ಸಚಿವೆ ಯಡವಟ್ಟು ಮಾಡಿದ್ದಾರೆ.
ಸಚಿವೆ ಬಿಜಿತಾ ನಾಥ್ ತ್ರಿಪುರಾದ ಧರ್ಮ ನಗರದ ಬಿಬಿಐ ಮೈದಾನದಲ್ಲಿ ಹಮ್ಮಿಕೊಂಡಿದ್ದ 67 ನೇ ಗಣರಾಜ್ಯಾತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಹೇಳಿದರೆಂದು ವರದಿ ಮಾಡಲಾಗಿದೆ.
ಎಲ್ಲರಿಗೂ 67 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ದೇಶಕ್ಕಾಗಿ ಹೋರಾಟ ನಡೆಸಿ, ಅಪಾರ ಕೊಡುಗೆ ನೀಡಿರುವ ಎಲ್ಲಾ ನಾಯಕರನ್ನು ಈ ವೇಳೆ ನಾವು ಸ್ಮರಿಸಬೇಕು ಎಂದು ತಾವು ಬರೆದು ತಂದಿದ್ದ ಟಿಪ್ಪಣಿ ನೋಡಿ ಹೇಳಿದರು.
ಸಚಿವರು ಹಲವು ಬಾರಿ ಸ್ವಾತಂತ್ರ್ಯ ದಿನಾಚರಣೆ ಎಂದು ಹೇಳಿದರು. ಹಿಂದೊಮ್ಮೆ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆಯನ್ನು ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಎಂದು ಹೇಳಿದ್ದರು.
ಇನ್ನು ಸಾಮಾನ್ಯ ಜ್ಞಾನ ಇಲ್ಲದವರು ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಶಿಕ್ಷಣದಂತ ಖಾತೆಗಳನ್ನು ನಿರ್ವಹಿಸಬಾರದು ಎಂದು ಬಿಜೆಪಿ ಆಗ್ರಹಿಸಿದೆ.
Advertisement