
ಜಮ್ಮು-ಕಾಶ್ಮೀರ: ಇತ್ತೀಚೆಗೆ ನಿಧನರಾದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ಕುಟುಂಬ ಜಮ್ಮುವಿನಲ್ಲಿರುವ ನಿವಾಸವನ್ನು ತೆರವುಗೊಳಿಸಿದ್ದು, ಸರ್ಕಾರದ ಭದ್ರತೆಯನ್ನು ಹಿಂದಿರುಗಿಸಿದೆ.
ಮುಫ್ತಿ ಕುಟುಂಬದ ಈ ನಡೆ ಅನೇಕ ಕುತೂಹಲಕ್ಕೆ ಕಾರಣವಾಗಿದೆ. ಮುಫ್ತಿಯವರ ಪತ್ನಿ ಗುಲ್ಶನ್ ಬಾನೊ, ಜಮ್ಮುವಿನಲ್ಲಿರುವ ಮುಖ್ಯಮಂತ್ರಿ ನಿವಾಸವನ್ನು ತೆರವುಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಿ ವಾಹನ, ಸಿಬ್ಬಂದಿಯನ್ನು ಹಿಂದಿರುಗಿಸಿದ್ದಾರೆ. ಸರ್ಕಾರದಿಂದ ಯಾವುದೇ ಭದ್ರತಾ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕು. ಇದರ ಬೆನ್ನಲ್ಲೇ ಮುಫ್ತಿ ಕುಟುಂಬದ ಈ ನಡೆ ಅನೇಕ ಕುತೂಹಲಗಳನ್ನುಂಟು ಮಾಡಿದೆ.
Advertisement