
ನವದೆಹಲಿ: ರಸ್ತೆ ನಿರ್ಮಾಣವನ್ನು ಫಾಸ್ಟ್ ಟ್ರಾಕ್ ಹೆದ್ದಾರಿ ಯೋಜನೆಗಳಾಗಿ ಮಾರ್ಪಡಿಸಲು, ಸರ್ಕಾರಿ ಖಾಸಗಿ ಪಾಲುದಾರಿಕೆ (ಪಿಪಿಪಿ)ಯೋಜನೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಹೆಚ್ಚಿನ ಹೂಡಿಕೆ ಆಕರ್ಷಿಸಲು ಹೈಬ್ರಿಡ್ ಅನ್ಯೂಟಿ ಮಾದರಿ ಅಳವಡಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ. ಈ ಹೈಬ್ರಿಡ್ ಅನ್ಯೂಟಿ ಮಾದರಿಯಲ್ಲಿ ನಿರ್ಮಾಣ ಕಂಪನಿ ಕಾಮಗಾರಿ ಅರಂಭಿಸಲು ವೆಚ್ಚದ ಶೇ.40 ರಷ್ಟು ಹಣವನ್ನು ಕೇಂದ್ರ ಸರ್ಕಾರ ಕಂಪನಿಗೆ ನೀಡಲಿದೆ. ಕಾಮಗಾರಿ ಮುಂದುವರೆದಂತೆ ಉಳಿದ ಬಂಡವಾಳ ಕಂಪನಿ ತೊಡಗಿಸಬೇಕು. ಇಂಥ ಮಾದರಿಯಲ್ಲಿ ಲಭ್ಯ ಹಣದಲ್ಲೇ ಹೆಚ್ಚು ಉದ್ಧದ ರಸ್ತೆ ನಿರ್ಮಾಣ ಸಾಧ್ಯ ಎನ್ನಲಾಗಿದೆ.
Advertisement