ಕೇಜ್ರಿವಾಲ್, ಸಿಸೋಡಿಯಾ ವಿರುದ್ಧ ಪ್ರಾಸಿಕ್ಯುಷನ್‌ಗೆ ಅನುಮತಿ ಕೋರಿದ ಸುಬ್ರಮಣ್ಯಯನ್ ಸ್ವಾಮಿ

ಬಿಜೆಪಿ ನಾಯಕ ಸುಬ್ರಮಣ್ಯಯನ್ ಸ್ವಾಮಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ...
ಸುಬ್ರಮಣ್ಯಯನ್ ಸ್ವಾಮಿ
ಸುಬ್ರಮಣ್ಯಯನ್ ಸ್ವಾಮಿ
ನವದೆಹಲಿ: ಬಿಜೆಪಿ ನಾಯಕ ಸುಬ್ರಮಣ್ಯಯನ್ ಸ್ವಾಮಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರ ವಿರುದ್ಧ ಪ್ಯಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 13(1)(ಡಿ) ಅಡಿ ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಸ್ವಾಮಿ ಮನವಿ ಮಾಡಿದ್ದಾರೆ.
ಕೇಜ್ರಿವಾಲ್ ಅವರು ಮೊದಲ ಬಾರಿ ಸಿಎಂ(ಡಿಸೆಂಬರ್ 28, 2013ರಿಂದ ಫೆಬ್ರುವರಿ 14, 2014) ಆದ ಸಂದರ್ಭದಲ್ಲಿ ದೆಹಲಿ ಸಿಎಂ ಹಾಗೂ ವಿತ್ತ ಸಚಿವ ಸಿಸೋಡಿಯಾ ಅವರು ಅಕ್ರಮವಾಗಿ ಎಸ್‌ಕೆಎನ್ ಅಸೋಸಿಯೇಟ್ಸ್ ಲಿ. ಪರವಾಗಿ ಕೆಲಸ ಮಾಡಿದ್ದಾರೆ ಎಂದು ಸ್ವಾಮಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಈ ಕಂಪನಿಯು ವ್ಯಾಟ್ ವಂಚಿಸಿದ ಪಟ್ಟಿಯಲ್ಲಿದ್ದು, ಕೇಜ್ರಿವಾಲ್ ಅವರು ಅಧಿಕಾರ ವಹಿಸಿಕೊಳ್ಳುವ 10 ದಿನಗಳ ಮುನ್ನ ಆದಾಯ ತೆರಿಗೆ ಇಲಾಖೆ ಆಯುಕ್ತರಿಗೆ ಈ ಕಂಪನಿಗೆ ನೋಟಿಸ್ ನೀಡಿದ್ದರು ಎಂದು ಬಿಜೆಪಿ ನಾಯಕ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com