ಜುಹು ಕಡಲ ತೀರಕ್ಕೆ ಬಂದು ಬಿದ್ದ 30 ಅಡಿ ಉದ್ದದ ಬೃಹತ್ ತಿಮಿಂಗಲ

30 ಅಡಿ ಉದ್ದದ ಬೃಹತ್ ತಿಮಿಂಗಿಲವೊಂದು ಮುಂಬೈಯ ಜುಹು ಕಡಲತೀರಕ್ಕೆ ಗುರುವಾರ ರಾತ್ರಿ ಬಂದು ಬಿದ್ದಿದೆ. ಸುಮಾರು 4 ಟನ್ ತೂಕ ಇರುವ ಈ ಈ ತಿಮಿಂಗಿಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: 30 ಅಡಿ ಉದ್ದದ ಬೃಹತ್ ತಿಮಿಂಗಿಲವೊಂದು ಮುಂಬೈಯ ಜುಹು ಕಡಲತೀರಕ್ಕೆ ಗುರುವಾರ ರಾತ್ರಿ ಬಂದು ಬಿದ್ದಿದೆ. ಸುಮಾರು 4 ಟನ್ ತೂಕ ಇರುವ ಈ ಈ ತಿಮಿಂಗಿಲ ರಾತ್ರಿ 10ಗೆ ಕಾಣಿಸಿಕೊಂಡಿದೆ.

ಪೊಲೀಸರು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು ತಿಮಿಂಗಿಲವನ್ನು ಪರಿಶೀಲಿಸುತ್ತಿದ್ದು, ತಜ್ಞರು ಇದು ಬ್ರೈಡೇ ತಿಮಿಂಗಿಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ತಿಮಿಂಗಿಲದ ಅವಶೇಷವನ್ನು ತೆಗೆಯಲು ಸ್ಥಳಕ್ಕೆ ಕ್ರೇನ್​ಗಳಿಗೆ ಕರೆಸಲಾಗಿದ್ದು, ಎರಡು – ಮೂರು ದಿನಗಳ ಹಿಂದೆಯೇ ಈ ತಿಮಿಂಗಿಲ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ

ಜಲ ಮಾಲಿನ್ಯ, ಕೈಗಾರಿಕಾ ಮಾಲಿನ್ಯ, ಪ್ಲಾಸ್ಟಿಕ್ ಸೇವನೆ ಅಥವಾ ಸಾವಿನಿಂದಲೂ ತಿಮಿಂಗಲ ಸತ್ತಿರಬಹುದು ಎಂದು ಪ್ರಾಣಿ ತಜ್ಞರು ತಿಳಿಸಿದ್ದಾರೆ.

ಮಹಾರಾಷ್ಟ್ರ ಕಡಲತೀರಕ್ಕೆ ಬಂದು ಬಿದ್ದಿರುವ ಎರಡನೇ ಅತ್ಯಂತ ದೊಡ್ಡ ತಿಮಿಂಗಿಲ ಇದಾಗಿದೆ. ಕಳೆದ ವರ್ಷ ನೀಲ ಬಣ್ಣದ ತಿಮಿಂಗಿಲವೊಂದು ಅಲಿಬಾಗ್ ಕಡಲತೀರಕ್ಕೆ ಬಂದು ಬಿದ್ದಿತ್ತು. ವಾಪಸ್ ಸಮುದ್ರಕ್ಕೆ ತಳ್ಳಲು ನಡೆದ 10 ಗಂಟೆಗಳ ಹೋರಾಟದ ಬಳಿಕ ಅದು ಪ್ರಾಣಬಿಟ್ಟಿತ್ತು.

ಈ ತಿಂಗಳ ಮೊದಲ ವಾರದಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಡಲತೀರಕ್ಕೆ 45 ಸಣ್ಣ ತಿಮಿಂಗಿಲಗಳು ಬಂದು ಬಿದ್ದಿದ್ದವು. ಅವುಗಳಲ್ಲಿ 40 ತಿಮಿಂಗಿಲಗಳನ್ನು ರಕ್ಷಿಸಿ ಸಮುದ್ರಕ್ಕೆ ಬಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com