ಏರ್ ಲಿಫ್ಟ್ ಬಗ್ಗೆ ಎಂಇಎ ಅಪಸ್ವರ

ಅಕ್ಷಯ್ ಕುಮಾರ್ ನಟನೆಯ ಏರ ಲಿಫ್ಟ್ ಚಿತ್ರದ ಬಗ್ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ವಿದೇಶಾಂಗ ವ್ಯವಹಾರಗಳ ಇಲಾಖೆ ಮಾತ್ರ ಅಪಸ್ವರ ತೆಗೆದಿದೆ.
ಏರ್ ಲಿಫ್ಟ್
ಏರ್ ಲಿಫ್ಟ್

ನವದೆಹಲಿ: ಅಕ್ಷಯ್ ಕುಮಾರ್ ನಟನೆಯ ಏರ್ ಲಿಫ್ಟ್ ಚಿತ್ರದ ಬಗ್ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ,  ವಿದೇಶಾಂಗ ಸಚಿವಾಲಯ ಮಾತ್ರ ಅಪಸ್ವರ ತೆಗೆದಿದೆ.

1990 ರಲ್ಲಿ ಕುವೈತ್ ನಿಂದ ಭಾರತೀಯರನ್ನು ರಕ್ಷಣೆ ಮಾಡಿದ ಕಾರ್ಯಾಚರಣೆಯನ್ನು ಏರ್ ಲಿಫ್ಟ್ ನಲ್ಲಿ ಬಿಂಬಿಸಿರುವ ರೀತಿಯ ಬಗ್ಗೆ ಅಪಸ್ವರ ತೆಗೆದಿರುವ ವಿದೇಶಾಂಗ ಸಚಿವಾಲಯ, ಏರ್ ಲಿಫ್ಟ್ ಚಿತ್ರ ನೈಜತೆಯನ್ನು ತೋರಿಸುವ ಬದಲು ಕಲಾತ್ಮಕ ಸ್ವಾತಂತ್ರ್ಯವನ್ನು ಬಳಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
 
ಏರ್ ಲಿಫ್ಟ್ ಚಿತ್ರದಲ್ಲಿ ಅಂದಿನ ವಿದೇಶಾಂಗ ಇಲಾಖೆಯ ಪಾತ್ರವನ್ನು ಬಿಂಬಿಸಿರುವ ರೀತಿಗೆ ಭಾರತದ ಹಾಲಿ, ಮಾಜಿ ರಾಯಭಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ರಾಯಭಾರಿಗಳಿಗಿಂತ ಉದ್ಯಮಿ ರಂಜಿತ್ ಕಟ್ಯಾಲ್ ಅವರನ್ನು ಹಿರೋ ನಂತೆ ಬಿಂಬಿಸಲಾಗಿದೆ ಎಂದು ಎಂಇಎ ಅಪಸ್ವರ ತೆಗೆದಿದೆ.
 
ಏರ್ ಲಿಫ್ಟ್ ಬಗ್ಗೆ ಪ್ರಶ್ನೆಗೆಳ ಸುರಿಮಳೆಗೈದಿರುವ ಎಂಇಎ, ಜಂಟಿ ನಿರ್ದೇಶಕ ಸಂಜೀವ್ ಕೊಹ್ಲಿ ಅವರನ್ನು ತೋರಿಸಿರುವ ಬಗ್ಗೆ ಪ್ರಮುಖವಾಗಿ ಪ್ರಶ್ನಿಸಿದೆ. ಚಿತ್ರದಲ್ಲಿ ಸಂದರ್ಶನ ನೀಡಿರುವ ಪಾತ್ರ ಕಾಲ್ಪನಿಕವಾಗಿದ್ದರೂ, 1998 ರ ಬ್ಯಾಚ್ ನ ಐಎಫ್ಎಸ್ ಅಧಿಕಾರಿ ಸಂಜೀವ್ ಕೊಹ್ಲಿ ಅವರು ಭಾರತದ ಹಾಲಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಏರ್ ಲಿಫ್ಟ್ ಚಿತ್ರ ಜನಸಾಮಾನ್ಯರ ಮೆಚ್ಚುಗೆ ಗಳಿಸಿದ್ದರು ನೈಜತೆ ವಿಷಯ ಎದುರಾದಾಗ ಚಿತ್ರದಲ್ಲಿ ನೈಜತೆಗಿಂತ ಕಲಾತ್ಮಕ ಸ್ವಾತಂತ್ರ್ಯವನ್ನು ಬಳಸಿಕೊಳ್ಳಲಾಗಿದೆ ಎಂಬ ಅಸಮಾಧಾನ ವಿದೇಶಾಂಗ ಇಲಾಖೆ ಹಾಗೂ ಅಲ್ಲಿನ ಮಾಜಿ, ಹಾಲಿ ಅಧಿಕಾರಿಗಳಿಂದ ಕೇಳಿಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com