ಕೆ.ವೀರಮಣಿ ಸಾಮಾಜಿಕ ನ್ಯಾಯ ಪ್ರಶಸ್ತಿಗೆ ನಿತೀಶ್ ಕುಮಾರ್ ಆಯ್ಕೆ

ಯುಎಸ್ ಮೂಲದ ಪೆರಿಯಾರ್ ಅಂತಾರಾಷ್ಟ್ರೀಯ ಸಂಸ್ಥೆ ಕೊಡಮಾಡುವ ಕೆ.ವೀರಮಣಿ ಸಾಮಾಜಿಕ ನ್ಯಾಯ ಪ್ರಶಸ್ತಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯ್ಕೆಯಾಗಿದ್ದಾರೆ.
ನಿತೀಶ್ ಕುಮಾರ್
ನಿತೀಶ್ ಕುಮಾರ್
Updated on

ನವದೆಹಲಿ: ಯುಎಸ್ ಮೂಲದ ಪೆರಿಯಾರ್ ಅಂತಾರಾಷ್ಟ್ರೀಯ ಸಂಸ್ಥೆ ಕೊಡಮಾಡುವ  ಕೆ.ವೀರಮಣಿ ಸಾಮಾಜಿಕ ನ್ಯಾಯ ಪ್ರಶಸ್ತಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ನಿರ್ಧಾರವನ್ನು ಸ್ವಾಗತಿಸಿರುವ ಜೆಡಿಯು ನಾಯಕ ಕೆಸಿ ತ್ಯಾಗಿ, ಇದೊಂದು ಶ್ರೇಷ್ಠ ಗೌರವ ಎಂದು ಬಣ್ಣಿಸಿದ್ದಾರೆ. ಸಾಮಾಜಿಕ ನ್ಯಾಯ ಪ್ರಶಸ್ತಿಯನ್ನು ಈ ಹಿಂದೆ  ವಿಪಿ ಸಿಂಗ್, ಎಂ ಕರುಣಾನಿಧಿ, ಸಿತಾರಾಮ್  ಕೇಸರಿ ಹಾಗೂ ಮಾಯಾವತಿ ಅವರಿಗೆ ನೀಡಲಾಗಿತ್ತು.

ಸಾಮಾಜಿಕ ನ್ಯಾಯ ಪ್ರಶಸ್ತ ಒಂದು ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ಹೊಂದಿರುತ್ತದೆ. ನಿತೀಶ್ ಕುಮಾರ್ ಅವರಿಗೆ ಪ್ರಶಸ್ತಿ ನೀಡುವುದರಿಂದ ದುರ್ಬಲ, ಕಡೆಗಣಿಸಲ್ಪಟ್ಟ ವರ್ಗದವರನ್ನು ನೈತಿಕ ಸ್ಥೈರ್ಯ ತುಂಬಿದಂತಾಗುತ್ತದೆ ಎಂದು ಕೆಸಿ ತ್ಯಾಗಿ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com