ಏಜೆಂಟ್ ಹಾವಳಿ ತಪ್ಪಿಸಲು ನಿರ್ಧಾರ : ಆನ್ ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಮಿತಿ

ಆನ್ ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿರುವ ರೈಲ್ವೆ ಇಲಾಖೆ ಟಿಕೆಟ್ ಬುಕ್ ಮಾಡಲು ಮಿತಿ ಹೇರಲು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆನ್ ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿರುವ ರೈಲ್ವೆ ಇಲಾಖೆ ಟಿಕೆಟ್ ಬುಕ್ ಮಾಡಲು ಮಿತಿ ಹೇರಲು ತೀರ್ಮಾನಿಸಿದೆ. ಒಂದು ಅಕೌಂಟ್ ನಲ್ಲಿ ಒಬ್ಬರಿಗೆ ತಿಂಗಳಲ್ಲಿ ಕೇವಲ ಆರು ಟಿಕೆಟ್ ಬುಕಿಂಗ್ ಮಾಡಲು ನಿರ್ಬಂಧ ಹೇರಿದೆ. ಈ ನಿಯಮ ಫೆಬ್ರವರಿ 15 ರಿಂದ ಜಾರಿಗೆ ಬರಲಿದೆ.

ಪ್ರಸ್ತುತ ಶೇ. 10ರಷ್ಟು ಅಕೌಂಟ್​ಗಳಿಂದ ತಿಂಗಳಿಗೆ 10ಕ್ಕಿಂತ ಹೆಚ್ಚಿನ ಟಿಕೆಟ್​ಗಳು ಬುಕ್ ಆಗುತ್ತಿದ್ದವು. ಇದರಿಂದ ಅರ್ಹ ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗುತ್ತಿರಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಟಿಕೆಟ್ ಬುಕ್ಕಿಂಗ್ ಮೇಲೆ ಮಿತಿ ಹೇರಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ವ್ಯವಸ್ಥೆಯಿಂದ ರೈಲಿನಲ್ಲಿ ಆಗಾಗ್ಗೆ ಪ್ರಯಾಣಿಸುವವರಿಗೆ ಕಷ್ಟವಾಗಲಿದೆ. ಜತೆಗೆ ಟಿಕೆಟ್ ಬುಕ್ಕಿಂಗ್ ಏಜೆಂಟ್​ಗಳು ಒಂದಕ್ಕಿಂತ ಹೆಚ್ಚು ಅಕೌಂಟ್ ಮಾಡಿ ಟಿಕೆಟ್ ಬುಕ್ ಮಾಡಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಕಾಳಸಂತೆ ಕೋರರ ಹಾವಳಿಯನ್ನು ತಪ್ಪಿಸುವ ದಿಶೆಯಲ್ಲಿ ತಿಂಗಳಲ್ಲಿ 10ರ ಬದಲು ಆರು ಇ-ಟಿಕೆಟ್‌ ಬುಕ್‌ ಮಾಡುವಲ್ಲಿನ ನಿರ್ಬಂಧದ ಹಿಂದಿನ ಉದ್ದೇಶ ಒಳ್ಳೆಯದೇ ಇರಬಹುದಾದರೂ ಪದೇ ಪದೇ ರೈಲು ಪ್ರಯಾಣ ಕೈಗೊಳ್ಳುವ ನೈಜ ಪ್ರಯಾಣಿಕರಿಗೆ ಮಾತ್ರ ಈ ನಿರ್ಬಂಧದಿಂದ ತೊಂದರೆ ಮತ್ತು ಅನನುಕೂಲತೆಯೇ ಹೆಚ್ಚು ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗಿದೆ.

ಬುಕ್ಕಿಂಗ್‌ ಆರಂಭವಾಗುವ ಮೊದಲ 30 ನಿಮಿಷಗಳ ವರೆಗೆ ಎಲ್ಲ ಬಗೆಯ ಟಿಕೆಟ್‌ ಬುಕ್‌ ಮಾಡುವ ಏಜೆಂಟ್‌ಗಳು ಯಾವುದೇ ಬಗೆಯ ಟಿಕೆಟ್‌ ಬುಕ್‌ ಮಾಡದಂತೆ ನಿರ್ಬಂಧಿಸುವ ಕ್ರಮ ಮಹತ್ವದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com