ನವದೆಹಲಿ: ಫ್ರೆಬ್ರವರಿ 23ರಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗುವ ಸಾಧ್ಯತೆ ಇದ್ದು, ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಫೆಬ್ರವರಿ 4ರಂದುಸಭೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಫೆಬ್ರವರಿ 29ರಂದು ತಮ್ಮ ಮೊದಲ ಹಾಗೂ ೨೦೧೫-೧೬ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸುವ ಸಾಧ್ಯತೆ ಇದೆ.
ಈ ಅಧಿವೇಶನದಲ್ಲಿ ರೇಲ್ವೆ ಹಾಗೂ ಕೇಂದ್ರ ಬಜೆಟ್ ಹೊರತಾಗಿ ಜಿಎಸ್ ಟಿ ಹಾಗೂ ರೀಯಲ್ ಎಸ್ಟೇಟ್ ಮಸೂದೆ ಸೇರಿದಂತೆ ಹಲವು ಪ್ರಮುಖ ವಿಧೇಯಕಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಯತ್ನಿಸಲಿದೆ.
ಸಂಸತ್ ಅಧಿವೇಶನ ಫೆಬ್ರವರಿ ೨೩ ರಂದು ಪ್ರಾರಂಭವಾಗಲಿದ್ದು, ಫೆ.28 ರಂದು ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಅಧಿವೇಶನ ಮಾರ್ಚ್ ೨೦ರವರೆಗೆ ಮುಂದುವರೆಯಲಿದೆ ಎಂದು ಹೆಸರು ಹೇಳಲಿಚ್ಛಿಸಿದ ಅಧಿಕಾರಿಯೊಬ್ಬರು ವರದಿಗಾರರಿಗೆ ತಿಳಿಸಿದ್ದಾರೆ. ಹೊಸ ಹಣಕಾಸು ವರ್ಷ ಏಪ್ರಿಲ್ ೧ಕ್ಕೆ ಪ್ರಾರಂಭವಾಗಲಿದೆ.