ಹೇಮಾ ಮಾಲಿನಿ
ಹೇಮಾ ಮಾಲಿನಿ

ರು.50 ಕೋಟಿ ಬೆಲೆ ಭೂಮಿಯನ್ನು ರು.70 ಸಾವಿರಕ್ಕೆ ಹೇಮಾಮಾಲಿನಿಗೆ ನೀಡಿದ 'ಮಹಾ' ಸರ್ಕಾರ

ಸಂಸದೆ, ನಟಿ ಹೇಮ ಮಾಲಿನಿ ಅವರು ನೃತ್ಯಶಾಲೆ ನಿರ್ಮಾಣಕ್ಕೆಂದು ಮಹಾರಾಷ್ಟ್ರ ಸರಕಾರದಿಂದ ಎರಡು ನಿವೇಶನಗಳನ್ನು ಪಡೆದಿರುವುದು ಮತ್ತು ಸರ್ಕಾರವು ...
Published on

ಮುಂಬಯಿ: ಸಂಸದೆ, ನಟಿ ಹೇಮ ಮಾಲಿನಿ ಅವರು ನೃತ್ಯಶಾಲೆ ನಿರ್ಮಾಣಕ್ಕೆಂದು ಮಹಾರಾಷ್ಟ್ರ ಸರಕಾರದಿಂದ ಎರಡು ನಿವೇಶನಗಳನ್ನು ಪಡೆದಿರುವುದು ಮತ್ತು ಸರ್ಕಾರವು ಮಾರುಕಟ್ಟೆ ಮೌಲ್ಯಕ್ಕಿಂತ ಅತಿ ಕಡಿಮೆ ದರಕ್ಕೆ ನಿವೇಶನ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

1997ರಲ್ಲಿ ಕಾಂಗ್ರೆಸ್ ಸರಕಾರ ಹೇಮಮಾಲಿನಿ ಅವರಿಗೆ ನೃತ್ಯಶಾಲೆಗಾಗಿ ಅಂಧೇರಿಯ ವೆರ್ಸೊರಾದಲ್ಲಿ ನಿವೇಶನ ನೀಡಿತ್ತು. ಆದರೆ ಆ ಸ್ಥಳ ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಗೆ ಸೇರಿದ ಕಾರಣ ಅಲ್ಲಿ ಶಾಲೆ ನಿರ್ಮಿಸಲು ಆಗಿರಲಿಲ್ಲ. ಇದರ ಬದಲಾಗಿ ಕಳೆದ ತಿಂಗಳು ಬಿಜೆಪಿ-ಶಿವಸೇನೆ ಸರಕಾರವು ಅಂಧೇರಿಯ ಒಶಿವರಾದಲ್ಲಿ ಎರಡು ಸಾವಿರ ಚದರ ಅಡಿ ನಿವೇಶನವನ್ನು ಹೇಮ ಮಾಲಿನಿಗೆ ನೀಡಿದೆ. ಆದರೆ ಹಿಂದಿನ ಸರ್ಕಾರ ನೀಡಿದ್ದ ನಿವೇಶನವನ್ನು ಹೇಮ ಮಾಲಿನಿ ಹಿಂತಿರುಗಿಸಿಲ್ಲ ಎಂದು ಮುಂಬಯಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರ ಮಹಾರಾಷ್ಟ್ರ ಸರ್ಕಾರ ಅಂಧೇರಿಯಲ್ಲಿ ನೀಡಿರುವ 2 ಸಾವಿರ ಚದರ ಅಡಿ ನಿವೇಶನ ಉದ್ಯಾನವನಕ್ಕೆ ಸೇರಿರುವ ಜಾಗವಾಗಿದ್ದು, ಇದರ ಮಾರುಕಟ್ಟೆ ಬೆಲೆ ರು.50 ಕೋಟಿ ಆಗಿದೆ. ಆದರೆ ಕೇವಲ 70 ಸಾವಿರ ರೂ.ಗೆ ಹೇಮ ಮಾಲಿನಿ ಅವರಿಗೆ ನೀಡಿದೆ ಎಂದು ಆರ್ ಟಿ ಐ ಕಾರ್ಯಕರ್ತರು ಬಹಿರಂಗ ಪಡಿಸಿದ್ದಾರೆ. ಇನ್ನೂ ಹೇಮಮಾಲಿನಿಗೆ ಪತ್ರ ಬರೆದಿರುವ ಮುಂಬಯಿ ಉಪನಗರ ಆಯುಕ್ತರು ಹಳೆಯ ನಿವೇಶನವನ್ನು ವಾಪಸ್ ಮಾಡುವಂತೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com