ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ
ದೇಶ
ಕೂಡಂಕುಳಂ ಪರಮಾಣು ವಿದ್ಯುತ್ ಒಂದನೇ ಘಟಕ ಪುನರಾರಂಭ
ಕೂಡಂಕುಳಂ ಪರಮಾಣು ವಿದ್ಯುತ್ ಒಂದನೇ ಘಟಕ ಶನಿವಾರ ಪುನರಾರಂಭಗೊಂಡಿದೆ.ಇಂದು ಬೆಳಗ್ಗೆ 7 ಗಂಟೆ 12 ನಿಮಿಷಕ್ಕೆ...
ತಿರುನಲ್ವೇಲಿ: ಕೂಡಂಕುಳಂ ಪರಮಾಣು ವಿದ್ಯುತ್ ಒಂದನೇ ಘಟಕ ಶನಿವಾರ ಪುನರಾರಂಭಗೊಂಡಿದೆ.
ಇಂದು ಬೆಳಗ್ಗೆ 7 ಗಂಟೆ 12 ನಿಮಿಷಕ್ಕೆ ಘಟಕ ವಿದ್ಯುತ್ ಉತ್ಪಾದನೆ ಆರಂಭಿಸಿದ್ದು, ಆರಂಭದಲ್ಲಿ 80 ಮೆಗಾವ್ಯಾಟ್ ವಿದ್ಯುತ್ ನ್ನು ಉತ್ಪಾದಿಸಲಾಯಿತು. ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿ ಸಾವಿರ ಮೆಗಾವ್ಯಾಟ್ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುತ್ತದೆ ಎಂದು ಕೂಡಂಕುಳಂ ಅಧಿಕಾರಿಗಳು ತಿಳಿಸಿದ್ದಾರೆ.
ಮೊನ್ನೆ ಜನವರಿ 21 ಸಂಜೆ 4.19ಕ್ಕೆ ಕೂಡಂಕುಳಂ ವಿದ್ಯುತ್ ಒಂದನೇ ಘಟಕ ಕೆಲವು ಸಮಸ್ಯೆಗಳಿಂದಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಕೂಡಂಕುಳಂನ ಒಂದನೇ ಘಟಕದಲ್ಲಿ ಅನೇಕ ತಾಂತ್ರಿಕ ದೋಷಗಳಿದ್ದು, ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂದು ಅಣುಬಾಂಬು ವಿರೋಧಿ ಕಾರ್ಯಕರ್ತ ಎಸ್ ಪಿ ಉದಯ್ ಕುಮಾರ್ ಇತ್ತೀಚೆಗೆ ಪ್ರತಿಪಾದಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ