'ಫೇಸ್ ಬುಕ್' ಮಗನ ವಿವಾಹಕ್ಕಾಗಿ ಅಮೆರಿಕಾದಿಂದ ಗೋರಕ್ ಪುರಕ್ಕೆ ಬಂದ 'ಅಮ್ಮ'

ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕನೊಬ್ಬನನ್ನು ತನ್ನ ಮಗನೆಂದು ಭಾವಿಸಿದ ಅಮೆರಿಕದ ಮಹಿಳೆಯೊಬ್ಬರು ಅಲ್ಲಿಂದ ಬಂದು ಆತನ ಮದುವೆಯಲ್ಲಿ...
ಡೆಬ್ ಮಿಲ್ಲರ್ ಅಮೆರಿಕಾ ಮಹಿಳೆ
ಡೆಬ್ ಮಿಲ್ಲರ್ ಅಮೆರಿಕಾ ಮಹಿಳೆ
Updated on

ನವದೆಹಲಿ : ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕನೊಬ್ಬನನ್ನು ತನ್ನ ಮಗನೆಂದು ಭಾವಿಸಿದ ಅಮೆರಿಕದ ಮಹಿಳೆಯೊಬ್ಬರು ಅಲ್ಲಿಂದ ಬಂದು ಆತನ ಮದುವೆಯಲ್ಲಿ ಪಾಲ್ಗೊಂಡು ಹರಸಿದ್ದಾರೆ.  

ಉತ್ತರ ಪ್ರದೇಶದ ಗೋರಖ್‌ಪುರದ 28  ವರ್ಷದ ಕೃಷ್ಣ ಮೋಹನ್‌ ತ್ರಿಪಾಠಿ ಅವರ ವಿವಾಹಕ್ಕೆ ಕ್ಯಾಲಿಫೋರ್ನಿಯಾದಿಂದ ಡೆಬ್‌ ಮಿಲ್ಲರ್‌ ಎಂಬ 60 ವರ್ಷದ ಮಹಿಳೆ ಆಗಮಿಸಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ.

ಡೆಬ್ ಮಿಲ್ಲರ್‌ ಮತ್ತು ತ್ರಿಪಾಠಿ ಅವರು ನಾಲ್ಕು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಿತರಾಗಿದ್ರು. ಕ್ರಮೇಣ ಈ ಇಬ್ಬರದ್ದು ತಾಯಿ ಮಗನ ರೀತಿಯಲ್ಲಿ  ಭಾವನೆಗಳನ್ನು ಹಂಚಿಕೊಂಡಿದ್ದರು.

ಕೃಷ್ಣ ಮೋಹನ್‌ ತ್ರಿಪಾಠಿ ಅವರು ಹದಿಹರೆಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು. ಮಿಲ್ಲರ್‌ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತ್ರಿಪಾಠಿ ಅವರನ್ನು ಮಗನಂತೆ ಭಾವಿಸಿ ಅವರ ವಿವಾಹದಲ್ಲಿ ಭಾಗಿಯಾಗಿ ಸಂತಸ ಹಂಚಿಕೊಂಡರು.

ಫೇಸ್‌ಬುಕ್‌ನಲ್ಲಿ ನೀಡಿದ ಆಮಂತ್ರಣವನ್ನು ಸ್ವೀಕರಿಸಿ  ಮದುವೆಗಾಗಿ ಅಮೆರಿಕದಿಂದ ಆಗಮಿಸಿದ್ದ ಮಿಲ್ಲರ್‌ ಅವರು 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೂತನ ದಂಪತಿಗೆ ನೀಡಿದ್ದಾರೆ.  ಭಾರತೀಯ ಸಂಸ್ಕೃತಿ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಮಿಲ್ಲರ್ ಬನಾರಸ್ ಸೀರೆ ಉಟ್ಟು ವಿವಾಹದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com