
ನವದೆಹಲಿ: ಭದ್ರತಾ ಕಾರಣವೊಡ್ಡಿ ಏರ್ ಇಂಡಿಯಾ ಸಿಬ್ಬಂದಿ ನನಗೆ ಗಾಲಿ ಕುರ್ಚಿಕೊಡಲಿಲ್ಲ. ಹೀಗಾಗಿ, ನಾನು ವಿಮಾನದಿಂದಿಳಿದು ಪ್ರಯಾಣಿಕರ ಅಂಗಣಕ್ಕೆ ತೆವಳುತ್ತಾ ಸಾಗಬೇಕಾಯಿತು ಎಂದು ವಿಕಲಚೇನ ಪ್ರಾಧ್ಯಪಕಿ ಅನಿತಾ ಘಾಯ್ ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಏರ್ ಇಂಡಿಯಾ, ವಿಮಾನದ ಬಾಗಿಲ್ಲಲ್ಲೇ ಅವರಿಗೆ ಗಾಲಿಕುರ್ಚಿ ಒದಗಿಸಿದ್ದೇವೆ ಎಂದಿದೆ.
ಶನಿವಾರ ದೆಹಲಿ ವಿವಿ ಸಹಾಯಕ ಪ್ರೊಫೆಸರ್ ಅನಿತಾ ಘಾಯ್ ಅವರು ಡೆಹ್ರಾಡೂನ್ ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿಯ ಐಜಿಐ ಏರ್ ಪೋರ್ಟ್ ನಲ್ಲಿ ಇಳಿಯುವಾಗ, ಗಾಲಿಕುರ್ಚಿ ಒದಗಿಸುವಂತೆ ನಾನು ಗಗನಸಖಿಯಲ್ಲಿ ಕೇಳಿಕೊಂಡರೂ, ಭದ್ರತೆಯ ನೆಪ ಹೇಳಿ ಸೌಲಭ್ಯ ಕಲ್ಪಿಸಲಿಲ್ಲ.
ಕೊನೆಗೆ ನಾನು ತೆವಳಿಕೊಂಡೇ ಪ್ರಯಾಣಿಕರ ಕೋಚ್ ತಲುಪಿದೆ ಎಂದು ಅನಿತಾ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಏರ್ ಲೈನ್ಸ್ ಗೆ ದೂರನ್ನೂ ನೀಡಿದ್ದಾರೆ. ಆದರೆ ಏರ್ ಇಂಡಿಯಾ ಈ ಆರೋಪವನ್ನು ತಲ್ಳಿಹಾಕಿದೆ.
Advertisement