ಮೂತ್ರ ಡೆಟಾಲ್ ನಷ್ಟೇ ಪರಿಣಾಮಕಾರಿ ಔಷಧ: ಲಾಲು ಪ್ರಸಾದ್ ಯಾದವ್

ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪ್ರಕಾರ ಮೂತ್ರ ಡೆಟಾಲ್ ನಷ್ಟೇ ಪರಿಣಾಮಕಾರಿ ಔಷಧವಂತೆ
ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್
Updated on

ಪಾಟ್ನ: ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪ್ರಕಾರ ಮೂತ್ರ ಡೆಟಾಲ್ ನಷ್ಟೇ ಪರಿಣಾಮಕಾರಿ ಔಷಧವಂತೆ
ವಿಭಿನ್ನ ರೀತಿಯ ರೋಗಗಳು ಮತ್ತು ಹೋಮಿಯೋಪತಿಯ ಸರಳತೆ ಎಂಬ ವಿಷಯದ ಬಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲಾಲು ಪ್ರಸಾದ್ ಯಾದವ್,  "ಬಾಲ್ಯದಲ್ಲಿ ನನಗೆ ಗಾಯಗಳುಂಟಾದರೆ ಮೂತ್ರವೇ ಅದಕ್ಕೆ ಪರಿಣಾಮಕಾರಿ ಔಷಧವಾಗಿತ್ತು, ಮೂತ್ರ ನಂಜುನಿರೋಧಕ( ಆಂಟಿ ಸೆಪ್ಟಿಕ್) ರೀತಿಯಲ್ಲಿ ಕೆಲಸ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಡೆಟಾಲ್ ನ್ನು ನಂಜು ನಿರೋಧಕವಾಗಿ ಬಳಸಲಾಗುತ್ತಿದೆ ಎಂದು  ಹೇಳಿರುವುದನ್ನು ಡೆಕನ್ ಹೆರಾಲ್ಡ್ ವರದಿ ಮಾಡಿದೆ.
ಹೋಮಿಯೋಪತಿ ಚಿಕಿತ್ಸಾ ವಿಧಾನ ಯಾವುದೇ ಔಷಧಿ ಇಲ್ಲದೇ ರೋಗಗಳನ್ನು ಗುಣಪಡಿಸುತ್ತದೆ. ಆದರೆ ಅಲೋಪತಿ ಚಿಕಿತ್ಸಾ ವಿಧಾನ ರೋಗಗಳನ್ನು ಗುಣಪಡಿಸುವುದಕ್ಕೆ ಶಸ್ತ್ರಚಿಕಿತ್ಸೆಯನ್ನು ಮಾತ್ರ ಒಪ್ಪುತ್ತದೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com