ಖಾಸಗಿ ಸಂಸ್ಥೆ ಮಹಿಳಾ ನೌಕರರಿಗೆ 6 ತಿಂಗಳ ಹೆರಿಗೆ ರಜೆ

ಸರ್ಕಾರಿ ಮಹಿಳಾ ನೌಕರರಿಗೆ ಸಿಗುವ ಹೆರಿಗೆ ರಜೆ ಸೌಲಭ್ಯದಂತೆ ಇನ್ನು ಮುಂಗೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೂ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸರ್ಕಾರಿ ಮಹಿಳಾ ನೌಕರರಿಗೆ ಸಿಗುವ ಹೆರಿಗೆ ರಜೆ ಸೌಲಭ್ಯದಂತೆ ಇನ್ನು ಮುಂಗೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೂ 6 ತಿಂಗಳವರೆಗೆ ರಜೆ ನೀಡುವ ನಿಯಮ ಜಾರಿಗೆ ಬರಲಿದೆ.

ಈ ಸಂಬಂಧ ಹೊಸ ವಿಧೇಯಕವನ್ನು ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ. ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಈ ವಿಷಯ ತಿಳಿಸಿದ್ದಾರೆ.
ಇದಕ್ಕೆ ಮಾತೃತ್ವ ಅನುಕೂಲ ಕಾಯ್ದೆ ಜಾರಿಯಾದರೆ ಈಗಿರುವ 12 ವಾರಗಳ ರಜೆಗಳ ಸೌಲಭ್ಯ 26 ವಾರಗಳಿಗೆ ವಿಸ್ತರಣೆಯಾಗಲಿದೆ. ಹೊಸ ನಿಯಮದನ್ವಯ ರಜೆ ನೀಡುವುದು ಕಡ್ಡಾಯವಾಗಲಿದೆ. ಕಂಪೆನಿಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವಿದ್ದರೆ ಆ ಸೌಕರ್ಯ ಒದಗಿಸಬಹುದು. ಈಗಾಗಲೇ ಟೆಕ್ಕಿಗಳಿಗೆ ಮನೆಯಿಂದ ಕೆಲಸ ಸೌಕರ್ಯ ಲಭ್ಯವಿದೆ.

ಇಲ್ಲಿಯವರೆಗೆ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ವೇತನ ಸಹಿತ 6 ತಿಂಗಳ ರಜೆ ಸೌಲಭ್ಯವಿತ್ತು. ಖಾಸಗಿ ಕ್ಷೇತ್ರಗಳಲ್ಲಿ ಗರಿಷ್ಟ 3 ತಿಂಗಳವರೆಗೆ ರಜೆ ನೀಡಲಾಗುತ್ತಿದೆ. ಇನ್ನು ಸಣ್ಣ ಪುಟ್ಟ ಕಂಪೆನಿಗಳಲ್ಲಿ ಕೆಲಸ ಮಾಡುವ, ಅಂಗಡಿ-ಮುಂಗಟ್ಟುಗಳಲ್ಲಿ ಕೆಲಸ ಮಾಡುವ ನೌಕರರಿಗೆ ರಜೆಯೇ ಸಿಗುವುದಿಲ್ಲ.

ನೂತನ ಕಾಯ್ದೆಯಲ್ಲಿ ಮಹಿಳೆಯರಿಗೆ ವೇತನ ಸಹಿತ ರಜೆ ಸಿಗುವಂತೆ ಪುರುಷರಿಗೆ ಈ ಸೌಲಭ್ಯವಿರುವುದಿಲ್ಲ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com