ಲಂಡನ್ ನಲ್ಲೇ ಲಲಿತ್ ಮೋದಿ ವಿಚಾರಣೆ ನಡೆಸಲು ಅನುಮತಿ ಕೋರಿದ ಇಡಿ

ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಮಾಜಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಅಧ್ಯಕ್ಷ ಲಲಿತ್ ಮೋದಿ ಅವರನ್ನು ಲಂಡನಲ್ಲೇ ವಿಚಾರಣೆಗೆ ಒಳಪಡಿಸಲು...
ಲಲಿತ್ ಮೋದಿ
ಲಲಿತ್ ಮೋದಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಮಾಜಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಅಧ್ಯಕ್ಷ ಲಲಿತ್ ಮೋದಿ ಅವರನ್ನು ಲಂಡನಲ್ಲೇ ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ ಯುಕೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಲಲಿತ್ ಮೋದಿ ವಿಚಾರಣೆಗಾಗಿ ಪ್ರಯತ್ನಗಳನ್ನು ಆರಂಭಿಸಿರುವ ಜಾರಿ ನಿರ್ದೇಶನಾಲಯ ಪರಸ್ಪರ ಕಾನೂನು ಸಹಕಾರ ಒಪ್ಪಂದ(ಎಂಎಲ್ಎಟಿ) ಅನ್ವಯ ವಿಚಾರಣೆ ನಡೆಸಲು ಅನುವು ಮಾಡಿಕೊಡುವಂತೆ ಬ್ರಿಟನ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಭಾರತಕ್ಕೆ ಲಲಿತ್ ಮೋದಿಯನ್ನು ವಾಪಸ್ಸು ಕರೆತರಲು ಭಾರತೀಯ ಪೊಲೀಸರು ಮತ್ತು ಸಿಬಿಐ ನಡೆಸುತ್ತಿರುವ ಪ್ರಯತ್ನ ಫಲ ನೀಡದ ಕಾರಣ ಜಾರಿ ನಿರ್ದೇಶನಾಲಯ ಲಂಡನ್ ನಲ್ಲೇ ಲಲಿತ್ ಮೋದಿ ವಿಚಾರಣೆ ನಡೆಸಲುವ ಪ್ರಯತ್ನಕ್ಕೆ ಕೈಹಾಕಿದೆ.

ಅಪರಾಧ ಪ್ರಕರಣಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳುವ ಸಲುವಾಗಿ ಭಾರತ ಮತ್ತು ಬ್ರಿಟನ್ 1995ರಲ್ಲಿ ಪರಸ್ಪರ ಕಾನೂನು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com