ಉತ್ತರಾಖಂಡ್ ಮೇಘ ಸ್ಫೋಟ: ಚಿತ್ರದುರ್ಗ ಯಾತ್ರಿಗಳು ಸುರಕ್ಷಿತ

ಚಿತ್ರದುರ್ಗ ಜಿಲ್ಲೆಯಿಂದ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ 40 ಭಕ್ತಾದಿಗಳು ಉಕೀಮತ್ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಿಂದ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ 40 ಭಕ್ತಾದಿಗಳು ಉಕೀಮತ್ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಜೂನ್ 25 ರಂದು ಚಿತ್ರದುರ್ಗದಿಂದ ಹೊರಟಾಗಿನಿಂದ ಇಲ್ಲಿಯವರೆಗೂ ನಾವು ಸುರಕ್ಷಿತವಾಗಿದ್ದೇವೆ. ನಮಗೆ ಯಾವುದೇ ಸಮಸ್ಯೆಯಾಗಿಲ್ಲ. ರಿಷಿಕೇಶ್ ಬೇಸ್ ಕ್ಯಾಂಪ್ ನಲ್ಲಿ  ಯಾತ್ರೆಗಾಗಿ ನಾವು ದಾಖಲಿಸಿದ್ದೆವು, ಅವರ ಮಾರ್ಗದರ್ಶನದಂತೆ ನಾವು ಪ್ರಯಾಣ ನಡೆಸಿದ್ದು ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಚಿತ್ರದುರ್ಗದಿಂದ 45 ಜನರ ತಂಡದಲ್ಲಿರುವ ಸದಸ್ಯ ಸೋಮೇಂದ್ರ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಕೇದಾರನಾಥ ಪ್ರವಾಸ ಮುಗಿಸಿದ್ದು ಎಡೆಬಿಡದೇ ಸುರಿಯುತ್ತಿರುವ ಮಳೆ ಹಾಗೂ ಭೂ ಕುಸಿತದಿಂದಾಗಿ ಪ್ರಯಾಣ ವಿಳಂಬವಾಗುತ್ತಿದೆ ಎಂದು ಮತ್ತೊಬ್ಬ ಭಕ್ತಾದಿ ಮಹದೇವಮ್ಮ ಎಂಬುವರು ಹೇಳಿದ್ದಾರೆ. ವಿವಿಧ ಮಠಗಳಿಂದ ಅಮರನಾಥ ಯಾತ್ರೆಗೆ ತೆರಳಿರುವ ಹಲವು ಸ್ವಾಮಿಜಿಗಳು ಸುರಕ್ಷಿತವಾಗಹಿದ್ದು, ಇಂದು ಬೆಂಗಳೂರು ತಲುಪಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com