ಢಾಕಾ ದಾಳಿಯ ಉಗ್ರರಿಗೆ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಸ್ಫೂರ್ತಿ!

ದಾಳಿ ನಡೆಸಿದ್ದ ಉಗ್ರರು ಮುಂಬೈ ನಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನಿಂದ ಸ್ಫೂರ್ತಿ ಪಡೆದಿದ್ದರು ಎಂಬ ವಿಷಯ ಬಹಿರಂಗವಾಗಿದೆ.
ಜಾಕಿರ್ ನಾಯಕ್
ಜಾಕಿರ್ ನಾಯಕ್

ಮುಂಬೈ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಬಂಧಿತರಾಗಿರುವ ಉಗ್ರರು ಒಂದೊಂದೇ ಅಚ್ಚರಿಯ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದು, ದಾಳಿ ನಡೆಸಿದ್ದ ಉಗ್ರರು ಮುಂಬೈನ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನಿಂದ ಸ್ಫೂರ್ತಿ ಪಡೆದಿದ್ದರು ಎಂಬ ವಿಷಯ ಬಹಿರಂಗವಾಗಿದೆ.

ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನ ಸ್ಥಾಪಕ ಡಾ.ಜಾಕಿರ್ ನಾಯಕ್ ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಇಸಿಸ್ ಉಗ್ರ ಸಂಘಟನೆ ಬೆಂಬಲಿಗ ಮೆಹ್ದಿ ಮಸ್ರೂರ್ ಬಿಸ್ವಾಸ್ ನಿಂದಲೂ ಸ್ಫೂರ್ತಿ ಪಡೆದಿದ್ದರು ಎಂದು ತಿಳಿದುಬಂದಿದೆ. 2010 ರಲ್ಲಿ ಜಾಕಿರ್ ನಾಯಕ್ ಭಯೋತ್ಪಾದನೆ ಹಾಗೂ ಇಸ್ಲಾಮ್ ಬಗ್ಗೆ ಮಾತನಾಡುತ್ತಾ, ಪ್ರತಿಯೊಬ್ಬ ಮುಸ್ಲಿಮರು ಭಯೋತ್ಪಾದಕರಾಗಿರಬೇಕು "ಅಂದರೆ ಕಳ್ಳನೊಬ್ಬ ಪೊಲೀಸನನ್ನು ನೋಡಿದರೆ ಭಯಪಡುತ್ತಾನೆ, ಹಾಗಾಗಿ ಪೊಲೀಸ್ ಕಳ್ಳರಲ್ಲಿ ಭಯ ಮೂಡಿಸುತ್ತಾನೆ. ಹಾಗೆಯೇ ಕಳ್ಳರ ಪಾಲಿಗೆ ಮುಸ್ಲಿಮರೂ ಭಯೋತ್ಪಾದಕರಾಗಿರಬೇಕು ಎಂದು ಜಾಕಿರ್ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಜಾಕಿರ್ ನಾಯಕ್ ವಿವಾದಾತ್ಮಕ ಹೇಳಿಕೆಯ ಪರಿಣಾಮ ಬ್ರಿಟನ್ ಆತನಿಗೆ ದೇಶವನ್ನು ಪ್ರವೇಶಿಸದಂತೆ ನಿಷೇಧ ವಿಧಿಸಿತ್ತು. ಪೀಸ್ ಟಿವಿಯಲ್ಲಿ ಪ್ರಸಾರವಾಗುವ ತನ್ನ ಭಾಷಣಗಳ ಮೂಲಕ ಜಾಕಿರ್ ನಾಯಕ್ ಬಾಂಗ್ಲಾದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ವಿವಾದಾತ್ಮಕ ಹೇಳಿಕೆಗಳ ಪರಿಣಾಮ ನಾಯಕ್ ಗೆ ಬ್ರಿಟನ್ ಅಷ್ಟೇ ಅಲ್ಲದೆ ಕೆನಡಾ, ಮಲೇಷ್ಯಾ ಪ್ರವೇಶಿಸದಂತೆ ನಿಷೇಧ ವಿಧಿಸಲಾಗಿದೆ. ಇನ್ನು ಉಗ್ರರ ಪಾಲಿಗೆ ಸ್ಫೂರ್ತಿಯಾಗಿದ್ದ ಇಸೀಸ್ ಉಗ್ರ ಸಂಘಟನೆ ಬೆಂಬಲಿಗ ಮೆಹ್ದಿ ಮಸ್ರೂರ್ ಬಿಸ್ವಾಸ್ ನನ್ನ ಇಸೀಸ್ ಉಗ್ರ ಸಂಘಟನೆ ಪರ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಆರೋಪದ ಅಡಿಯಲ್ಲಿ 2014 ರಲ್ಲಿ ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com