ಮುಂದಿನ 5 ವರ್ಷಗಳಲ್ಲಿ ಭಾರತದ ಐಟಿ ವಲಯದಲ್ಲಿ 6.4 ಲಕ್ಷ ಉದ್ಯೋಗ ಕಡಿತ!

ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಕಡಿಮೆ ಕೌಶಲ್ಯದ ಕೆಲಸಗಳನ್ನು ಆಟೊಮೇಷನ್ ಮಾಡುವುದರಿಂದ ಮುಂದಿನ ಐದು ವರ್ಷಗಳಲ್ಲಿ ಸುಮಾರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಕಡಿಮೆ ಕೌಶಲ್ಯದ ಕೆಲಸಗಳನ್ನು ಆಟೊಮೇಷನ್ ಮಾಡುವುದರಿಂದ ಮುಂದಿನ ಐದು ವರ್ಷಗಳಲ್ಲಿ ಸುಮಾರು 6.4 ಲಕ್ಷ ಉದ್ಯೋಗಗಳು ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆಯೊಂದು ಹೇಳಿದೆ.
ಇದೇ ಮೊದಲ ಬಾರಿ ಐಟಿ ಉದ್ಯಮ ಭಾರತೀಯ ಉದ್ಯೋಗಾಂಕ್ಷಿಗಳಿಗೆ ಭಾರಿ ಆಘಾತ ನೀಡಿದೆ. ಆದರೆ ಭಾರತೀಯ ಐಟಿ ಉದ್ಯಮದ ತಜ್ಞರು ಈಗಾಗಲೇ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸುವ ಬಗ್ಗೆ ಸಲಹೆ ನೀಡಿದ್ದಾರೆ ಎಂದು ಸಂಶೋಧನಾ ವರದಿ ತಿಳಿಸಿದೆ.
2021ರ ವೇಳೆಗೆ ಭಾರತ, ಫಿಲಿಫೈನ್ಸ್, ಇಂಗ್ಲೆಂಡ್ ಹಾಗೂ ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಐಟಿ ಉದ್ಯಮದಲ್ಲಿ ಶೇ. 9ರಷ್ಟು ಅಂದರೆ 1.4 ಮಿಲಿಯನ್ ಉದ್ಯೋಗಗಳು ಕಡಿತಗೊಳ್ಳಲಿವೆ ಎಂದು ಎಚ್ಎಫ್ಎಸ್ ಸಂಶೋಧನೆ ಹೇಳಿದೆ.
ಆಟೊಮೇಷನ್ ಮತ್ತು ರೋಬೋಗಳೇ ಎಲ್ಲವನ್ನು ಮಾಡುತ್ತವೆ ಎನ್ನಲು ಸಾಧ್ಯವಿಲ್ಲ. ಆದರೆ ಅದು ಒಂದಷ್ಟು ಪರಿಣಾಮ ಬೀರುತ್ತದೆ. ಒಟ್ಟಾರೆಯಾಗಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಎಲ್ಲಾ ವಲಯದಲ್ಲೂ ಮತ್ತಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ನಾವು ನಂಬಿದ್ದೇವೆ ಎಂದು ನಾಸ್ಕಾಂ ಹಿರಿಯ ಉಪಾಧ್ಯಕ್ಷ ಸಂಗೀತಾ ಗುಪ್ತಾ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com