ಸ್ಮೃತಿ ಇರಾನಿ
ಸ್ಮೃತಿ ಇರಾನಿ

ಸ್ಮೃತಿ ಇರಾನಿಗೆ ಎಚ್ಆರ್ ಡಿ ಖಾತೆ ತಪ್ಪಲು ಆರ್ ಎಸ್ ಎಸ್ ಕಾರಣ?

ಸ್ಮತಿ ಇರಾನಿ ಗೆ ಮಾನವ ಸಂಪನ್ಮೂಲ ಖಾತೆ ಕೈ ತಪ್ಪಲು ಆರ್ ಎಸ್ಎಸ್ ಮಹತ್ವದ ಪಾತ್ರ ವಹಿಸಿದೆ ಎನ್ನಲಾಗಿದೆ. ಕೇಂದ್ರ ಸಂಪುಟ ಪುನಾರಚನೆಯಲ್ಲಿ..

ನವದೆಹಲಿ: ಒಳ್ಳೆಯ ಕೆಲಸಗಳಿಂದ ವಿವಾದಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ನೀಡಿದ್ದಾರೆ.

 ಹಲವು ಕಾರಣಗಳಿಂದಾಗಿ ವಿವಾದಕ್ಕೆ ಗುರಿಯಾಗಿದ್ದ ಸ್ಮೃತಿ ಇರಾನಿ ಅವರಿಗೆ ಸಂಪುಟ ಪುನಾರಚನೆ ವೇಳೆ ಮಹತ್ವದ ಮಾನವ ಸಂಪನ್ಮೂಲ ಖಾತೆಯಿಂದ ಹೆಚ್ಚು ಪ್ರಮುಖವಲ್ಲದ ಜವಳಿ ಖಾತೆ ನೀಡಲಾಗಿದೆ.

ಕಿರುತೆರೆ ನಟಿ ಹಾಗೂ ರಾಜ್ಯಸಭೆ ಸದಸ್ಯೆ ಸ್ಮೃತಿ ಇರಾನಿ ಅವರಿಗೆ 2014 ರಲ್ಲಿ , ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿರೋಧದ ನಡುವೆಯೂ ಮಾನವ ಸಂಪನ್ಮೂಲ ಖಾತೆ ನೀಡುವುದರ ಮೂಲಕ ಪ್ರಧಾನಿ ಮೋದಿ ತಮ್ಮ ಸಂಪುಟದಲ್ಲಿ ಸ್ಥಾನ ನೀಡಿದ್ದರು.

ದುರಾದೃಷ್ಟವಶಾತ್, ಎರಡು ವರ್ಷಗಳ ಅವಧಿಯಲ್ಲಿ ಸ್ಮೃತಿ ಇರಾನಿ ಮಾಡಿದ್ದ ಹಲವು ಒಳ್ಳೆಯ ಕೆಲಸಗಳು ಕೆಲ ವಿವಾದಗಳಿಂದಾಗಿ ಮುಚ್ಚಿಹೋಗಿವೆ.  ದೆಹಲಿಯ ಜವಹರ್ ಲಾಲ್ ನೆಹರು ವಿವಿ ಕ್ಯಾಂಪಸ್ ಪ್ರತಿಭಟನೆ ಮತ್ತು ಹೈದರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಗಳು ಸ್ಮೃತಿ ಇರಾನಿ ಕೈಯ್ಯಿಂದ ಮಾನವ ಸಂಪನ್ಮೂಲ ಖಾತೆ ಪ್ರಕಾಶ್ ಜಾವಡೇಕರ್ ಅವರಿಗೆ ವರ್ಗಾವಣೆಯಾಗಲು ಕಾರಣ ಎನ್ನಲಾಗಿದೆ.

ಸ್ಮತಿ ಇರಾನಿ ಗೆ ಮಾನವ ಸಂಪನ್ಮೂಲ ಖಾತೆ ಕೈ ತಪ್ಪಲು ಆರ್ ಎಸ್ಎಸ್ ಮಹತ್ವದ ಪಾತ್ರ ವಹಿಸಿದೆ ಎನ್ನಲಾಗಿದೆ. ಕೇಂದ್ರ ಸಂಪುಟ ಪುನಾರಚನೆಯಲ್ಲಿ ಈ ಬಾರಿ ಆರ್ ಎಸ್ ಎಸ್ ಪ್ರಮುಖ ಪಾತ್ರ ವಹಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಣಕಾಸು ಸಚಿವ ಅರುಣ್ ಜೈಟ್ಲಿ, ಮತ್ತು ರಾಜನಾಥ್ ಸಿಂಗ್ ಅವರುಗಳ ಜೊತೆ ನಡೆಸಿದ ಸಂಪುಟ ಪುನಾರಚನೆ ಸಭೆಯಲ್ಲಿ ಆರ್ ಎಸ್ ಎಸ್ ತನ್ನ ಪ್ರಭಾವ ಬೀರಿರುವಂತೆ ಕಂಡುಬರುತ್ತಿದೆ.

ಪುಣೆ ಮೂಲದ ರಾಜಕಾರಣಿ ಪ್ರಕಾಶ್ ಜಾವ್ಡೇಕರ್ ಅವರಿಗೆ ಮಾನವ ಸಂಪನ್ಮೂಲ ಖಾತೆ ಹೊಣೆಗಾರಿಕೆ ನೀಡಲಾಗಿದೆ. ಜಾವ್ಡೇಕರ್ ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದ ವಿಶ್ವಾಸ ಗಳಿಸಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಸ್ವಚ್ಛಭಾರತ್ ಅಭಿಯಾನದಡಿ ಜಾವ್ಡೇಕರ್ ನಿರ್ವಹಿಸಿದ ಪಾತ್ರ, ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ಲೈಮೇಟ್ ಚೇಂಜ್ ಸಂಕಿರಣಗಳಲ್ಲಿ ಜಾವ್ಡೇಕರ್ ತೋರಿದ ನಿಪುಣತೆ ಮೋದಿ ಹಾಗೂ ಆರ್ ಎಸ್ ಎಸ್ ಗೆ ಮಚ್ಚುಗೆಯಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಅರಣ್ಯೀಕರಣ ಪರಿಹಾರ ನಿಧಿಗೆ 41 ಸಾವಿರ ಕೋಟಿ ಹಣ ತಂದಿದ್ದು ಜಾವ್ಡೇಕರ್ ಗೆ ವರವಾಗಿ ಪರಿಣಮಿಸಿದೆ.

Advertisement

X
Kannada Prabha
www.kannadaprabha.com