ಎಚ್ ಆರ್ ಡಿ ಖಾತೆ ಕಳೆದುಕೊಂಡ ಸ್ಮೃತಿ ಇರಾನಿಗೆ ಜವಳಿ ಹೊಣೆಗಾರಿಕೆ

ಸಂಪುಟದಲ್ಲಿ ಮಹತ್ವದ ಖಾತೆ ಪಡೆದುಕೊಂಡಿದ್ದ ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಕಳೆದುಕೊಂಡು ಜವಳಿ ಖಾತೆಗೆ ಶಿಫ್ಟ್ ಆಗಿದ್ದಾರೆ. ಸ್ಮೃತಿ ಇರಾನಿ ಅಧಿಕಾರ ...
ಪ್ರಾಕಶ್ ಜಾವ್ಡೇಕರ್ ಮತ್ತು ಸ್ಮೃತತಿ ಇರಾನಿ
ಪ್ರಾಕಶ್ ಜಾವ್ಡೇಕರ್ ಮತ್ತು ಸ್ಮೃತತಿ ಇರಾನಿ

ನವದೆಹಲಿ: ಹಲವು ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಕೇಂದ್ರ ಸಂಪುಟ ಪುನಾರಚನೆ ಮುಗಿದಿದ್ದು, ಮಹತ್ವದ ಖಾತೆಗಳನ್ನು ವಹಿಸಿಕೊಂಡು ಹಲವು ವಿವಾದಗಳಿಗೆ ಸಿಕ್ಕಿದ್ದ ಸಚಿವರಿಗೆ  ಪ್ರಧಾನಿ ನರೇಂದ್ರ ಮೋದಿ ಹಿಂಬಡ್ತಿ ನೀಡಿದ್ದಾರೆ.

ಸಂಪುಟದಲ್ಲಿ ಮಹತ್ವದ ಖಾತೆ ಪಡೆದುಕೊಂಡಿದ್ದ ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಕಳೆದುಕೊಂಡು ಜವಳಿ ಖಾತೆಗೆ ಶಿಫ್ಟ್ ಆಗಿದ್ದಾರೆ. ಸ್ಮೃತಿ ಇರಾನಿ ಅಧಿಕಾರ ವಹಿಸಿಕೊಂಡಾಗಿನಿಂದ ಕೆಲಸ ಮಾಡಿದ್ದಕ್ಕಿಂತ ಬರೀ ಗದ್ದಲ ಮಾಡಿದ್ದೇ ಹೆಚ್ಚು ಹೀಗಾಗಿ ಅವರು ಮಹತ್ವದ ಖಾತೆ ಕಳೆದುಕೊಳ್ಳಬೇಕಾಯಿತು ಎಂದು ಹೆಸರು ಹೇಳಲು ಇಚ್ಚಿಸದ ಇರಾನಿ ಸಂಪುಟ ಸಹೋದ್ಯೋಗಿ ತಿಳಿಸಿದ್ದಾರೆ.

ಜೊತೆಗೆ ಡಿವಿ ಸದಾನಂದ ಗೌಡರ ಕೈಯಿಂದ ಕಾನೂನು ಖಾತೆ ಕೈತಪ್ಪಿದ್ದು, ಸ್ಟ್ಯಾಟಿಸ್ಟಿಕ್ಸ್ ಎಂಡ್ ಪ್ರೊಗ್ರಾಮ್ ಇಪ್ಲಿಮೆಂಟೇಶನ್ ಖಾತೆ ನೀಡಲಾಗಿದೆ. ಐಟಿ ಖಾತೆ ಸಚಿವ ರವಿಶಂಕರ್ ಪ್ರಸಾದ್ ಗೆ ಹೆಚ್ಚುವರಿಯಾಗಿ ಕಾನೂನು ಖಾತೆ ಜವಾಬ್ದಾರಿ ವಹಿಸಲಾಗಿದೆ. ವೆಂಕಯ್ಯ ನಾಯ್ಡುಗೆ ಹೆಚ್ಚುವರಿಯಾಗಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಜವಾಬ್ದಾರಿ ನೀಡಲಾಗಿದೆ.

2014 ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದು ಚುನಾವಣೆಯಲ್ಲಿ ಜಯಗಳಿಸಿದ್ದ ಹರ್ಯಾಣ ನಾಯಕ ಚೌದರಿ ಬಿರೇಂದರ್ ಸಿಂಗ್ ಅವರಿಗೆ ಕಬ್ಬಿಣ ಮತ್ತು ಉಕ್ಕು ಖಾತೆ ನೀಡಲಾಗಿದೆ.

ಸಂಪುಟ ಪುನಾರಚನೆಯನ್ನು  ಆರ್ ಎಸ್ ಎಸ್ ನಿರ್ವಹಿಸಿದ್ದು ತಮ್ಮ ಖಾತೆಗಳಲ್ಲಿ ಕಡಿಮೆ ಫರ್ಪಾಮೆನ್ಸ್ ತೋರಿದ ಸಚಿವರನ್ನು ಕೈಬಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಚಿಸಿತ್ತು ಎನ್ನಲಾಗಿದೆ.

ಪ್ರಧಾನಿಯವರ ಆಪ್ತರಾಗಿರುವ ತಾವರ್ ಚಂದ್ ಗೆಹ್ಲೋಟ್ ಮತ್ತು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com