ಮುಷ್ಕರಕ್ಕೆ ಮಾತುಕತೆಯೇ ಮದ್ದು: ನೂತನ ಎಚ್ಆರ್ ಡಿ ಸಚಿವ ಜಾವಡೆಕರ್

ಮುಷ್ಕರಕ್ಕೆ ಮಾತುಕತೆಯೇ ಮದ್ದು ಎಂದಿರುವ ನೂತನ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೆಕರ್ ಅವರು, ಪಕ್ಷದ ರಾಜಕೀಯ ಮಾಡುವುದಕ್ಕೆ...
ಪ್ರಕಾಶ್ ಜಾವಡೆಕರ್
ಪ್ರಕಾಶ್ ಜಾವಡೆಕರ್
ನವದೆಹಲಿ: ಮುಷ್ಕರಕ್ಕೆ ಮಾತುಕತೆಯೇ ಮದ್ದು ಎಂದಿರುವ ನೂತನ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೆಕರ್ ಅವರು, ಪಕ್ಷದ ರಾಜಕೀಯ ಮಾಡುವುದಕ್ಕೆ ಶಿಕ್ಷಣ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಈ ವಿವಾದಗಳಿಂದಲೇ ಸುದ್ದಿ ಮಾಡಿದ್ದ ಮಾಜಿ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಸ್ಥಾನಕ್ಕೆ ಪ್ರಕಾಶ್ ಜಾವಡೆಕರ್ ಬಂದಿದ್ದು, ಸಲಹೆ ಸೂಚನೆಗಳನ್ನು ನಾನು ಮುಕ್ತವಾಗಿ ಸ್ವೀಕರಿಸುತ್ತೇನೆ ಮತ್ತು ಎಲ್ಲರೊಂದಿಗೆ ತಾವು ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ.
ಇಂದು ವರದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಮಾನವ ಸಂಪನ್ಮೂಲ ಸಚಿವೆಯಾಗಿ ಸ್ಮೃತಿ ಇರಾನಿ ಅವರು ಶಿಕ್ಷಣದ ಗುಣಮಟ್ಟ ಸುಧಾರಣೆ, ವಿದ್ಯಾರ್ಥಿಗಳಿಗೆ ಕಲಿಕಾ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ ಎಂದರು.
ಮಾನವ ಸಂಪನ್ಮೂಲ ಸಚಿವಾಲಯವು ಕಳೆದೆರಡು ವರ್ಷಗಳಲ್ಲಿ ಕೈಗೊಂಡಿರುವ ಉಪಕ್ರಮಗಳನ್ನು ಮುಂದುವರೆಸುವುದಾಗಿ ಪ್ರಕಾಶ ಜಾವಡೆಕರ್ ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಮುಷ್ಕರಗಳಿಂದಲೇ ನಾನು ಬೆಳೆದು ಬಂದಿದ್ದೇನೆ. ಹೀಗಾಗಿ ನಾನು ಪ್ರತಿಯೊಬ್ಬರೊಂದಿಗೂ ಚರ್ಚೆಗೆ ಸಿದ್ಧನಿದ್ದೇನೆ. ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರೆ ಅಲ್ಲಿ ಪ್ರತಿಭಟನೆ ಅಥವಾ ಮುಷ್ಕರ ನಡೆಸುವ ಅಗತ್ಯವೇ ಇರುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com