
ವಾರಂಗಲ್: ಮಾನವೀಯತೆ ಪದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬಹುಶಃ ಸಿಗಲಾರದು. ವೃದ್ಧಾಶ್ರಮದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮುಸ್ಲಿಂ ಮಹಿಳೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ವಾರಾಂಗಲ್ ನ ಹನ್ಮಕೊಂಡದ ಸಹೃದಯ ವೃದ್ದಾಶ್ರಮದಲ್ಲಿ 75 ವರ್ಷದ ಕೀರ್ತಿ ಶ್ರೀನಿವಾಸ್ ಎಂಬ ದೀರ್ಘಕಾಲದ ಅನಾರೋಗ್ಯದಿಂದ ಮೃತ ಪಟ್ಟಿದ್ದರು.
ಈ ವಿಷಯನ್ನು ಕೀರ್ತಿ ಶ್ರೀನಿವಾಸ್ ಪುತ್ರ ಶರತ್ ಗೆ ತಿಳಿಸಲಾಯಿತು, ಆದರೆ ಆತ ತಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು, ಅಂತಿಮ ವಿಧಿವಿಧಾನಗಳನ್ನು ನೆರೆವೇರಿಸಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋದ. ನಂತರ ಬಂದ ಸಂಬಂಧಿಕರು ಭೇಟಿ ನೀಡಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೇ ನುಣುಚಿಕೊಂಡರು.
ನಂತರ ಕೀರ್ತಿ ಶ್ರೀನಿವಾಸ್ ಅವರನ್ನು ನೋಡಿಕೊಳ್ಳುತ್ತಿದ್ದ ಮುಸ್ಲಿಂ ಮಹಿಳೆ ಯಾಕೂಬಿ ಹಿಂದೂ ವಿಧಿ ವಿಧಾನದಂತೆ ತಾನೇ ಮೃತ ವ್ಯಕ್ತಿಯ ಅಂತಿಮ ಸಂಸ್ಕಾರ ನಡೆಸುವುದಾಗಿ ನಿರ್ಧರಿಸಿದರು. ಅದರಂತೆ ಶವದ ಮೆರವಣಿಗೆಯಲ್ಲಿ, ಹೆಗಲ ಮೇಲೆ ಮಡಕೆ ಹೊತ್ತು,ಕೊಂಡು ಹೋಗಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
Advertisement