ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣ: ಘಟನೆಗೂ ಮುನ್ನ ಮದ್ಯ ಸೇವಿಸಿದ್ದ ಶಾಸಕನ ಪುತ್ರ

ರಾಜಸ್ತಾನ ಪಕ್ಷೇತರ ಶಾಸಕ ನಂದ ಕಿಶೋರ್ ಮಹಾರಿಯಾ ಪುತ್ರ ಸಿದ್ದಾರ್ಥ್ ಮಹಾರಿಯಾ ತನ್ನ ಬಿಎಂ ಡಬ್ಲ್ಯೂ ಕಾರು ಡಿಕ್ಕಿ ಹೊಡೆದು ಆಟೋ ರಿಕ್ಷಾದಲ್ಲಿದ್ದ ಮೂವರು ಸಾವನ್ನಪ್ಪಿದ್ದ
ಅಪಘಾತಕ್ಕೀಡಾದ ಬಿಎಂಡಬ್ಲ್ಯೂ ಕಾರು
ಅಪಘಾತಕ್ಕೀಡಾದ ಬಿಎಂಡಬ್ಲ್ಯೂ ಕಾರು
Updated on

ಜೈಪುರ: ರಾಜಸ್ತಾನ ಪಕ್ಷೇತರ ಶಾಸಕ ನಂದ ಕಿಶೋರ್ ಮಹಾರಿಯಾ ಪುತ್ರ ಸಿದ್ದಾರ್ಥ್ ಮಹಾರಿಯಾ ತನ್ನ ಬಿಎಂ ಡಬ್ಲ್ಯೂ ಕಾರು ಗುದ್ದಿ ಆಟೋ ರಿಕ್ಷಾದಲ್ಲಿದ್ದ ಮೂವರು ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಪೊಲೀಸರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ.

ಅಪಘಾತ ನಡೆಯುವುದಕ್ಕೂ ಮುನ್ನ ಸಿದ್ದಾರ್ಥ್ ಬಾರ್ ವೊಂದಕ್ಕೆ ತೆರಳಿ ಮದ್ಯ ಸೇವಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.

ಜುಲೈ 2ನೇ ತಾರೀಖಿನ ಮಧ್ಯರಾತ್ರಿ ಅಪಘಾತ ನಡೆಯುವ ಎರಡು ಗಂಟೆಗೂ ಮುನ್ನ ಶಾಸಕನ ಪುತ್ರ ಮತ್ತವನ ಜೊತೆ ಇದ್ದ ಮೂವರು ವ್ಯಕ್ತಿಗಳು ಮಧ್ಯ ಸೇವಿಸಿದ್ದರು.

ಡ್ರೈವರ್ ಸೀಟಿನಲ್ಲಿದ್ದ ಸಿದ್ದಾರ್ಥ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಮೂರು ಮಂದಿಯ ಸಾವಿಗೆ ಕಾರಣನಾಗಿದ್ದ, ನಂತರ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದಿದ್ದ ಸಿದ್ದಾರ್ಥ್ ಬಿಎಂಡಬ್ಲ್ಯೂ ಕಾರು ಪೊಲೀಸರು ಸೇರಿ ನಾಲ್ವರನ್ನು ಗಾಯಗೊಳಿಸಿತ್ತು. ಈ ಸಂಬಂಧ ಸಿದ್ದಾರ್ಥ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಅಪಘಾತ ನಡೆದ ಸಮಯದಲ್ಲಿ ಚಾಲಕ ಡ್ರೈವಿಂಗ್ ಮಾಡುತ್ತಿದ್ದ. ಆತ ಕುಡಿದಿರಲಿಲ್ಲ ಎಂದು ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com