ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸ ಮಾರಾಟ ನಿಷೇಧ!

ನಾಯಿ ಮಾಂಸವನ್ನು ಆಹಾರವಾಗಿ ಬಳಕೆ ಮಾಡುವುದನ್ನು ನಿಷೇಧಿಸಲು ನಾಗಾಲ್ಯಾಂಡ್ ಸರ್ಕಾರ ಕ್ರಮ ಕೈಗೊಂಡಿದ್ದು ಈ ಬಗ್ಗೆ ಮಾರ್ಗಸೂಚಿಗಳನ್ನು ಸ್ಥಳೀಯ ಸಂಸ್ಥೆಗಳಿಗೆ ರವಾನಿಸಿದೆ.
ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸ ಮಾರಾಟ ನಿಷೇಧ!
ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸ ಮಾರಾಟ ನಿಷೇಧ!

ಕೊಹಿಮಾ: ನಾಯಿ ಮಾಂಸವನ್ನು ಆಹಾರವಾಗಿ ಬಳಕೆ ಮಾಡುವುದನ್ನು ನಿಷೇಧಿಸಲು ನಾಗಾಲ್ಯಾಂಡ್ ಸರ್ಕಾರ ಕ್ರಮ ಕೈಗೊಂಡಿದ್ದು ಈ ಬಗ್ಗೆ ಮಾರ್ಗಸೂಚಿಗಳನ್ನು ಸ್ಥಳೀಯ ಸಂಸ್ಥೆಗಳಿಗೆ ರವಾನಿಸಿದೆ.

ಸಚಿವ ಸಂಪುಟ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೇ ಇದ್ದರೂ, ಜಂಟಿ ಕಾರ್ಯದರ್ಶಿ ಒಬಾಂಗ್ಲ ಜಮೀರ್ ಈ ಆದೇಶ ಹೊರಡಿಸಿದ್ದು, ಮಾಂಸಕ್ಕಾಗಿ ನಾಯಿಗಳನ್ನು ಹಿಡಿದು ಹತ್ಯೆ ಮಾಡುವುದನ್ನು ತಡೆಗಟ್ಟುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು ಎಂದು  ನಗರಪಾಲಿಕೆ ವ್ಯವಹಾರಗಳ ನಿರ್ದೇಶನಾಲಯದ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ನಾಯಿ ಮಾಂಸ ಮಾರಾಟವನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಎಂಎಡಿ,  ನಾಯಿ ಮಾಂಸ ಮಾರಾಟ ಮಾಡುವ ಎಲ್ಲಾ ಅಂಗಡಿಗಳನ್ನು ಮುಚ್ಚಿಸಬೇಕೆಂದು ಸೂಚನೆ ನೀಡಿದೆ. ಅತಿ ಹೆಚ್ಚು ಮಾಂಸ ಬಳಕೆ ಮಾಡುವ ರಾಜ್ಯಗಳ ಪೈಕಿ ನಾಗಾಲ್ಯಾಂಡ್ ಸಹ ಒಂದಾಗಿದ್ದು ನಾಯಿ ಮಾಂಸದಿಂದಲೂ ಖಾದ್ಯಗಳನ್ನು ತಯಾರಿಸಲಾಗುತ್ತದೆ. ನಾಗಾಲ್ಯಾಂಡ್ ನಲ್ಲಿ ಒಂದು ಕೆಜಿ ನಾಯಿ ಮಾಂಸಕ್ಕೆ 300 ರೂ ಕ್ಕೂ ಹೆಚ್ಚು ಬೆಲೆ ಇದೆ.

ನಾಯಿ ಮಾಂಸದಲ್ಲಿ ಔಷಧೀಯ ಗುಣಗಳಿದ್ದು ಹೆಚ್ಚಿನ ಪೌಷ್ಟಿಕಾಂಶ ಇದೆ ಎಂದು ಹೇಳಲಾಗುವುದರಿಂದ ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸಕ್ಕೆ ಹೆಚ್ಚು ಬೇಡಿಕೆ ಇದ್ದು ರಾಜ್ಯದ ಹೊರಭಾಗದಿಂದಲೂ ಮಾಂಸಕ್ಕಾಗಿ ನಾಯಿಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com