ಮುಸ್ಲಿಂ ಸಮುದಾಯದ ಬೆಂಬಲ ಕೋರಿದ ಜಾಕಿರ್ ನಾಯಕ್: ಸರ್ಕಾರಕ್ಕೆ ಶಿವಸೇನೆಯಿಂದ ಎಚ್ಚರಿಕೆ

ಉಗ್ರಗಾಮಿಗಳಿಗೆ ಸ್ಫೂರ್ತಿಯಾಗಿರುವ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದೆ.
ಶಿವಸೇನೆ ಮುಖ್ಯಸ್ಥೆ ಮನಿಷಾ ಕಯಾಂಡೆ
ಶಿವಸೇನೆ ಮುಖ್ಯಸ್ಥೆ ಮನಿಷಾ ಕಯಾಂಡೆ

ಮುಂಬೈ: ಉಗ್ರಗಾಮಿಗಳಿಗೆ ಸ್ಫೂರ್ತಿಯಾಗಿರುವ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್ ವಿರುದ್ಧ ಕಠಿಣ ಕ್ರಮ ಕೈಗೊಂಡು ಆತನ ಸಾಮಾಜಿಕ ಜಾಲತಾಣಗಳ ಖಾತೆ, ವೆಬ್ ಸೈಟ್ ಗಳನ್ನು ನಿರ್ಬಂಧಿಸಬೇಕು ಎಂದು ಶಿವಸೇನೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದೆ.

ಜಾಕಿರ್ ನಾಯಕ್ ವಿರುದ್ಧ ಕೇಳಿಬಂದಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಕಾನೂನು ಸುವ್ಯಸ್ಥೆ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸರ್ಕಾರ ಆತನ ಸಾಮಾಜಿಕ ಜಾಲತಾಣಗಳ ಖಾತೆ, ವೆಬ್ ಸೈಟ್ ಗಳನ್ನು ನಿರ್ಬಂಧಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. ತಮ್ಮ ವಿರುದ್ಧ ಉಗ್ರಗಾವಾದಕ್ಕೆ ಪ್ರಚೋದನೆ ನೀಡುತ್ತಿರುವ ಆರೋಪ ಕೇಳಿಬಂದ ನಂತರ ಜಾಕಿರ್ ನಾಯಕ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಮುದಾಯದಿಂದ ಬೆಂಬಲ ಕೋರಿದ್ದಾರೆ. ಜಾಕಿರ್ ನಾಯಕ್ ನ ಸಾಮಾಜಿಕ ಜಾಲತಾಣಗಳ ಖಾತೆ, ವೆಬ್ ಸೈಟ್ ನ್ನು ನಿರ್ಬಂಧಿಸಲು ಕೂಡಲೇ ಕ್ರಮ ಕೈಗೊಳ್ಳದೇ ಇದ್ದರೆ ಇದು ರಾಜ್ಯದ ಕಾನೂನು ಸುವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಶಿವಸೇನೆ ಮುಖ್ಯಸ್ಥೆ ಮನಿಷಾ ಕಯಾಂಡೆ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ತನಿಖೆ ಎದುರಿಸುತ್ತಿರುವ ಜಾಕಿರ್ ನಾಯಕ್ ತನ್ನ ಬೆಂಬಲಕ್ಕೆ ನಿಲ್ಲುವಂತೆ ಮುಸ್ಲಿಂ ಸಮುದಾಯಕ್ಕೆ ಟ್ವಿಟರ್ ಮೂಲಕ ಈಗಾಗಲೇ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com