ನಾಳೆಯಿಂದ ಎರಡು ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ

ಐಡಿಬಿಐ ಬ್ಯಾಂಕ್‌ ಖಾಸಗೀಕರಣ ಹಾಗೂ ಎಸ್ ಬಿಐ ವಿಲೀನ ವಿರೋಧಿಸಿ ಸರ್ಕಾರಿ ಬ್ಯಾಂಕ್ ನೌಕರರು ನಾಳೆ ಮತ್ತು ನಾಡಿದ್ದು ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಐಡಿಬಿಐ ಬ್ಯಾಂಕ್‌ ಖಾಸಗೀಕರಣ ಹಾಗೂ ಎಸ್ ಬಿಐ ವಿಲೀನ ವಿರೋಧಿಸಿ ನಾಳೆ ಮತ್ತು ನಾಡಿದ್ದು ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದೆ.

ಕೇಂದ್ರ ಕಾರ್ಮಿಕ ಇಲಾಖೆಯ ಮುಖ್ಯ ಆಯುಕ್ತರೊಂದಿಗೆ ನಡೆದ ಮಾತುಕತೆ ಮುರಿದು ಬಿದ್ಧ ನಂತರ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.

ಜುಲೈ 12ರಂದು  ಮತ್ತು ಜುಲೈ 13 ರಂದು ಮುಷ್ಕರ ನಡೆಸಲು ತೀರ್ಮಾನ ನಡೆಸಿದ್ದು, ಬ್ಯಾಂಕ್ ವಹಿವಾಟು ಅಸ್ತವ್ಯಸ್ತಗೊಳ್ಳಲಿದೆ. ಜುಲೈ 12 ರಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್‌ ಜೈಪುರ ಸೇರಿದಂತೆ ಎಸ್‌ಬಿಐನ ಐದು ಸಹವರ್ತಿ ಬ್ಯಾಂಕ್‌ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.

ಜುಲೈ 13 ರಂದು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘಟನೆ ಮತ್ತು ರಾಜ್ಯ ವಲಯದ ಉದ್ಯೋಗಿಗಳ ಸಂಘಟನೆಯೂ ಮುಷ್ಕರದಲ್ಲಿ ಭಾಗವಹಿಸಲಿವೆ. ಮುಷ್ಕರದಿಂದಾಗಿ ಈ ಎರಡೂ ದಿನಗಳು ಬ್ಯಾಂಕ್‌ ವ್ಯವಹಾರಕ್ಕೆ ತೊಡಕಾಗಲಿವೆ ಎಂದು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಈಗಾಗಲೇ ಸೂಚನೆ ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com