ನಾಲ್ಕು ಆಫ್ರಿಕಾ ದೇಶಗಳ ಪ್ರವಾಸ ಮುಗಿಸಿ ಬಂದ ಪ್ರಧಾನಿ ಮೋದಿ

ನಾಲ್ಕು ದೇಶಗಳ ಆಫ್ರಿಕಾ ಪ್ರವಾಸ ಮುಗಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಭಾರತಕ್ಕೆ...
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ನವದೆಹಲಿ: ನಾಲ್ಕು ದೇಶಗಳ ಆಫ್ರಿಕಾ ಪ್ರವಾಸ ಮುಗಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಭಾರತಕ್ಕೆ ವಾಪಸಾದರು.
ಕೇನ್ಯಾದಿಂದ ಇಂದು ಸ್ವದೇಶಕ್ಕೆ ಪ್ರಧಾನಿ ವಾಪಾಸ್ಸಾದರು. ಖಂಡ ರಾ ಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಈ ಪ್ರವಾಸವನ್ನು ಕೈಗೊಂಡಿದ್ದರು. ಮೊಝಂಬಿಕ್, ದಕ್ಷಿಣ ಆಫ್ರಿಕಾ, ಕೇನ್ಯಾ ಮತ್ತು ಟಾಂಜಾನಿಯಾ ದೇಶಗಳಲ್ಲಿ ಪ್ರವಾಸ ಮುಗಿಸಿ ಬಂದಿದ್ದಾರೆ.
ಆಫ್ರಿಕಾ ರಾಷ್ಟ್ರಗಳ ಪ್ರವಾಸ ಮುಗಿಸಿ ಬಂದಿರುವ ಪ್ರಧಾನಿ ದೆಹಲಿಗೆ ತಲುಪಿದ್ದಾರೆ ಎಂದು ಪ್ರಧಾನಿ ಸಚಿವಾಲಯ ಟ್ವೀಟ್ ಮಾಡಿದೆ.
ನಿನ್ನೆ ಕೇನ್ಯಾ ಅಧ್ಯಕ್ಷ ಉಹುರು ಕೆನ್ಯತ್ತ ಅವರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ, ಏಳು ಒಪ್ಪಂದಗಳಿಗೆ ಸಹಿ ಹಾಕಿದರು. ಅದರಲ್ಲಿ ರಕ್ಷಣೆ ಮತ್ತು ಭದ್ರತೆ ವಿಷಯಗಳು ಸೇರಿವೆ. ಎರಡೂ ದೇಶಗಳು ಪರಸ್ಪರ ಸಹಕಾರವನ್ನು ಆಳವಾಗಿ ಮತ್ತು ವಿಸ್ತರಗೊಳಿಸಲು ನಿರ್ಧರಿಸಿವೆ.
ಪ್ರಮುಖ ನೀರಿನ ಪೂರೈಕೆ ಯೋಜನೆಗೆ ಟಾಂಜಾನಿಯಾಕ್ಕೆ 92 ದಶಲಕ್ಷ ಡಾಲರ್ ನೆರವು ನೀಡಿರುವ ಭಾರತ ಆ ರಾಷ್ಟ್ರದೊಂದಿಗೆ 5 ಒಪ್ಪಂದಗಳಿಗೆ ಸಹಿ ಹಾಕಿದೆ.
ದಕ್ಷಿಣ ಆಫ್ರಿಕಾದಲ್ಲಿ ಅಲ್ಲಿನ ಅಧ್ಯಕ್ಷ ಜಾಕೊಬ್ ಜುಮಾ ಅವರೊಂದಿಗೆ ಆರ್ಥಿಕತೆ ಸೇರಿದಂತೆ ಅನೇಕ ವಿಷಯಗಳ ಕುರಿತು ಮಾತುಕತೆ ನಡೆಸಿದರು.
ರಕ್ಷಣಾ ಉತ್ಪಾದನೆಗೆ ಭಾರತ ಅತ್ಯುತ್ತಮ ದೇಶ ಎಂದ ಮೋದಿ, ದಕ್ಷಿಣ ಆಫ್ರಿಕಾ ಜೊತೆ ಈ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರ ಬಯಸಿದರು. ದಕ್ಷಿಣ ಆಫ್ರಿಕಾ, ಭಾರತಕ್ಕೆ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆ ದೇಶವಾಗಿದೆ. ಇತ್ತೀಚೆಗೆ ಪರಮಾಣು ಪೂರೈಕೆ ಗುಂಪಿನಲ್ಲಿ ಭಾರತದ ಸದಸ್ಯತ್ವಕ್ಕೆ ದಕ್ಷಿಣ ಆಫ್ರಿಕಾ ಸಹಕಾರ ನೀಡಿದ್ದಕ್ಕೆ ಮೋದಿ ಧನ್ಯವಾದ ಹೇಳಿದರು.
ಮೊಜಂಬಿಕದಲ್ಲಿ ಮೋದಿಯವರು ಅಲ್ಲಿನ ಅಧ್ಯಕ್ಷ ಫಿಲಿಪ್ ನ್ಯೂಸಿಯೊಂದಿಗೆ ಮಾತುಕತೆ ನಡೆಸಿದರು. ಎರಡೂ ದೇಶಗಳು ಮೂರು ಒಪ್ಪಂದಗಳಿಗೆ ಸಹಿ ಹಾಕಿದರು. ಅದರಲ್ಲಿ ಒಂದು ದೀರ್ಘಾವಧಿಯ ಒಪ್ಪಂದವಾಗಿದ್ದು, ಇದರಡಿ ಭಾರತ ಈ ದೇಶದಿಂದ ಧಾನ್ಯಗಳನ್ನು ಖರೀದಿಸಿ ಧಾನ್ಯಗಳ ಕೊರತೆಯನ್ನು ತಗ್ಗಿಸಿ ಬೆಲೆಯೇರಿಕೆಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com