
ಮುಂಬೈ: ಭಾರತಕ್ಕೆ ವಾಪಸ್ಸಾಗುವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದ ಭಯೋತ್ಪಾದನೆಯನ್ನು ಉತ್ತೇಜಿಸುವ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್, ಈಗ ಸ್ಕೈಪ್ ಮೂಲಕ ನಡೆಸಬೇಕಿದ್ದ ಸುದ್ದಿಗೋಷ್ಠಿ ರದ್ದುಗೊಂಡಿದೆ.
ಜು.14 ರಂದು ಮುಂಬೈ ನ ಅಗ್ರಿಪದದಲ್ಲಿ ನಡೆಯಬೇಕಿದ್ದ ಸುದ್ದಿಗೋಷ್ಠಿಯನ್ನು ಜಾಕಿರ್ ನಾಯಕ್ ದಿಢೀರ್ ರದ್ದುಗೊಂಡಿದೆ. ಸುದ್ದಿಗೋಷ್ಠಿ ನಡೆಯಬೇಕಿದ್ದ ಮೆಹಫಿಲ್ ಹಾಲ್ ನಲ್ಲಿ ಅನುಮತಿ ನಿರಾಕರಿಸಿರುವುದರಿಂದ ಸುದ್ದಿಗೋಷ್ಠಿ ರದ್ದುಗೊಂಡಿದೆ ಎಂದು ತಿಳಿದುಬಂದಿದೆ.
ಮೊದಲು ಆಗಿಪದದಲ್ಲಿರುವ ಮೆಹಫಿಕ್ ಹಾಲ್ ಮಾತ್ರ ಜಾಕಿರ್ ನಾಯಕ್ ಸುದ್ದಿಗೋಷ್ಠಿಗೆ ಅನುಮತಿ ನಿರಾಕರಣೆ ಮಾಡಿದೆ ಎಂದು ಹೇಳಲಾಗಿತ್ತಾದರೂ ಮುಂಬೈ ನ ಹಲವು ಹೋಟೆಲ್ ಗಳು ಜಾಕಿರ್ ನಾಯಕ್ ಸುದ್ದಿಗೋಷ್ಠಿಗೆ ಅನುಮತಿ ನಿರಾಕರಿಸಿವೆ. ಪರಿಣಾಮ ಸ್ಕೈಪ್ ಮೂಲಕ ನಡೆಯಬೇಕಿದ್ದ ಸುದ್ದಿಗೋಷ್ಠಿ ರದ್ದುಗೊಂಡಿದೆ.
Advertisement