
ಜಮ್ಮು: 1931 ರಲ್ಲಿ ಕಾಶ್ಮೀರದಲ್ಲಿ ನಡೆದಿದ್ದ ಗಲಭೆಯ ಹಿನ್ನೆಲೆಯಲ್ಲಿ ಮೂಲ ವಾಸಸ್ಥಾನಗಳಿಂದ ಸ್ಥಳಾಂತರಗೊಂಡಿರುವ ಕಾಶ್ಮೀರಿ ಪಂಡಿತರ ಗುಂಪು ಕರಾಳ ದಿನವನ್ನು ಆಚರಿಸಿದೆ.
ಪಂಡಿತರ ಕುಟುಂಬಗಳ ಮೇಲೆ 1931 ರಲ್ಲಿ ನಡೆದಿದ್ದ ದಾಳಿಯನ್ನು ನೆನಪಿಸಿಕೊಂಡಿರುವ ಕಾಶ್ಮೀರಿ ಪಂಡಿತರ ಗುಂಪು, ಭದ್ರತೆಗಾಗಿ ಮನವಿ ಮಾಡಿದೆ. 1931 ರಲ್ಲಿ ದಾಳಿ ನಡೆದ ದಿನದಿಂದ ಈ ವರೆಗೂ ಪಂಡಿತರು ಎದುರಿಸುತ್ತಿರುವ ಪರಿಸ್ಥಿತಿ ಬದಲಾಗಿಲ್ಲ, 1931 ರಲ್ಲಿ ದಾಳಿಗೊಳಗಾದವರು 2016 ರಲ್ಲೂ ದಾಳಿಗೊಳಗಾಗುತ್ತಿದ್ದಿವಿ ಎಂದು ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ್ದ ಕಾಶ್ಮೀರಿ ಪಂಡಿತರ ಕಾನ್ಫರೆನ್ಸ್ ನ ಅಧ್ಯಕ್ಷ ರವೀಂದ್ರ ರೈನಾ ತಿಳಿಸಿದ್ದಾರೆ. ಉಗ್ರ ಬುರ್ಹಾನ್ ಮುಜಾಫರ್ ವಾನಿ ಹತ್ಯೆ ನಂತರ ತಮ್ಮ ಮನೆಗಳತ್ತ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ಪಂಡಿತರ ಸಮುದಾಯಕ್ಕೆ ಭದ್ರತೆ ನೀಡಬೇಕು ಎಂದು ರವೀಂದ್ರ ರೈನಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Advertisement