ಕಾಲ್ ಸೆಂಟರ್ ಉದ್ಯೋಗಿ ಜಿಗಿಶಾ ಕೊಲೆ ಪ್ರಕರಣ: 3 ತಪ್ಪಿತಸ್ಥರೆಂದು ಕೋರ್ಟ್ ತೀರ್ಪು

2009ರಲ್ಲಿ ದೆಹಲಿಯಲ್ಲಿ ನಡೆದ ಕಾಲ್ ಸೆಂಟರ್ ಉದ್ಯೋಗಿ ಜಿಗಿಶಾ ಘೋಷ್ ಅವರನ್ನು ದರೋಡೆ ಮಾಡಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ...
ಜಿಗಿಶಾ ಘೋಷ್
ಜಿಗಿಶಾ ಘೋಷ್
ನವದೆಹಲಿ: 2009ರಲ್ಲಿ ದೆಹಲಿಯಲ್ಲಿ ನಡೆದ ಕಾಲ್ ಸೆಂಟರ್ ಉದ್ಯೋಗಿ ಜಿಗಿಶಾ ಘೋಷ್ ಅವರನ್ನು ದರೋಡೆ ಮಾಡಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ತಪ್ಪಿತಸ್ಥರು ಎಂದು ದೆಹಲಿ ಸಾಕೇತ್ ಕೋರ್ಟ್ ಗುರುವಾರ ತೀರ್ಪು ನೀಡಿದೆ.
 ಸುಮಾರು ಏಳು ವರ್ಷಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ಇಂದು ಪ್ರಕರಣ ಅಂತಿಮ ತೀರ್ಪು ಪ್ರಕಟಿಸಿದ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.
2009ರ ಮಾರ್ಚ್ 17ರಂದು ದಕ್ಷಿಣ ದೆಹಲಿಯ ಮನೆಗೆ ತೆರಳುತ್ತಿದ್ದ 28 ವರ್ಷದ ಜಿಗಿಶಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳ ತಂಡ, ಆಕೆಯ ಎಟಿಎಂನ ಪಿನ್ ನಂಬರ್ ಗಾಗಿ ಒತ್ತಾಯಿಸಿದ್ದರು. ಪಿನ್ ನಂಬರ್ ಕೊಡಲು ನಿರಾಕರಿಸಿದ ಜಿಗಿಶಾಳನ್ನು ಹತ್ಯೆ ಮಾಡಿ, ಬಳಿಕ ಮೃತದೇಹವನ್ನು ದೆಹಲಿಯ ಹೊರವಲಯದಲ್ಲಿ ಬಿಸಾಡಿ ಹೋಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com