ಕೂಲಿ ಮಾಡುವ ಮಹಿಳೆಗೆ ಬಂಪರ್: 1 ಕೋಟಿ ರು.ಲಾಟರಿ ಬಹುಮಾನ

ತಿರುವನಂತಪುರಂ ಜಿಲ್ಲೆಯ ಕಿಲಿಮನೂರು ಗ್ರಾಮದ ರಬ್ಬರ್ ತೋಟದಲ್ಲಿ ಕೆಲಸ ಮಾಡುವ ನಬೀಸಾ ಎಂಬ ಮಹಿಳೆಯೊಬ್ಬರು 1 ಕೋಟಿ ರೂ. ಬಹುಮಾನ ಪಡೆದುಕೊಂಡಿದ್ದಾರೆ....
ಕೇರಳ ಸ್ತ್ರೀ ಶಕ್ತಿ ಲಾಟರಿ
ಕೇರಳ ಸ್ತ್ರೀ ಶಕ್ತಿ ಲಾಟರಿ

ತಿರುವನಂತಪುರ: ಕೇರಳ ಸರ್ಕಾರದ ಸ್ತ್ರೀಶಕ್ತಿ ಲಾಟರಿಯ 11ನೇ ಆವೃತ್ತಿಯಲ್ಲಿ ತಿರುವನಂತಪುರಂ ಜಿಲ್ಲೆಯ ಕಿಲಿಮನೂರು ಗ್ರಾಮದ ರಬ್ಬರ್ ತೋಟದಲ್ಲಿ ಕೆಲಸ ಮಾಡುವ ನಬೀಸಾ ಎಂಬ ಮಹಿಳೆಯೊಬ್ಬರು 1 ಕೋಟಿ ರೂ. ಬಹುಮಾನ ಪಡೆದುಕೊಂಡಿದ್ದಾರೆ.

ಒಮ್ಮೆಗೆ 50 ಟಿಕೇಟ್‌ ಖರೀದಿಸುವ ಹವ್ಯಾಸ ಹೊಂದಿದ್ದ ನಬೀಸಾ ಈ ಹಿಂದೆ ಲಾಟರಿಯಲ್ಲಿ ಸಾವಿರ ದಿಂದ ಐದು ಸಾವಿರದೊರೆಗಿನ ಸಣ್ಣ ಮೊತ್ತವನ್ನು ಪಡೆದಿದ್ದರು. ಎಲ್ಲಾ ತೆರಿಗೆ, ಚಲನ್‌ ಕಳೆದು 63 ಲಕ್ಷ ರೂಪಾಯಿ ಹಣ ನಬೀಸಾ ಕೈಗೆ ಸಿಗಲಿದೆ.

ಅಪಘಾತವೊಂದರಲ್ಲಿ ಒಂದು ಕಾಲು ಕಳೆದುಕೊಂಡಿರುವ ತನ್ನ ತಂಗಿ ಹಾಗೂ ರೋಗ ಪೀಡಿತ ತಾಯಿಯನ್ನು ರಬ್ಬರ್ ತೋಟದಲ್ಲಿ ಕೂಲಿ ಮಾಡಿ ಸಾಕುತ್ತಿದ್ದಾರೆ.

ಒಂದು ಕೋಟಿ ರೂ. ಬಹುಮಾನ ಬಂದಿರುವುದು ಖುಷಿ ತಂದಿದೆ. ಇದರಿಂದ ನನ್ನ ಕಷ್ಟಗಳು ದೂರವಾಗಲಿವೆ. ಲಾಟರಿ ಹಣದಲ್ಲಿ ನಾನು ಸ್ವಲ್ಪ ಜಮೀನು ಖರೀದಿಸಿ ಒಂದು ಮನೆ ಕಟ್ಟಬೇಕು. ನಂತರ ತಂಗಿಗಾಗಿ ಒಂದು ಸಣ್ಣ ಅಂಗಡಿ ಮಾಡಿಕೊಡಬೇಕು ಎಂಬ ಆಸೆ ಇದೆ ಎಂದು ನಬೀಸಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com