ಕ್ಲಿನಿಕ್ ಮುಂದೆ ಮೂತ್ರವಿಸರ್ಜನೆ ಮಾಡಿದ ವ್ಯಕ್ತಿಗೆ ಗುಂಡಿಕ್ಕಿದ ವೈದ್ಯ

ತಮ್ಮ ಕ್ಲಿನಿಕ್ ಮುಂದೆ ಮೂತ್ರ ವಿಸರ್ಜನೆ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿ ಮೇಲೆ ಹೋಮಿಯೋಪತಿ ವೈದ್ಯನೊಬ್ಬ ಗುಂಡು ಹಾರಿಸಿರುವ ಘಟನೆ ನಡೆದಿದೆ...
ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ(ಸಂಗ್ರಹ ಚಿತ್ರ)
ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ(ಸಂಗ್ರಹ ಚಿತ್ರ)
Updated on
ಭುವನೇಶ್ವರ್: ತಮ್ಮ ಕ್ಲಿನಿಕ್ ಮುಂದೆ ಮೂತ್ರ ವಿಸರ್ಜನೆ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿ ಮೇಲೆ ಹೋಮಿಯೋಪತಿ ವೈದ್ಯನೊಬ್ಬ ಗುಂಡು ಹಾರಿಸಿರುವ ಘಟನೆ ನಡೆದಿದೆ. 
ನಯಪಲ್ಲಿ ಇಂದ್ರದನು ಮಾರ್ಕೆಟ್ ನಲ್ಲಿರುವ ತಮ್ಮ ಕ್ಲಿನಿಕ್ ಬಳಿ ಮೂತ್ರ ವಿಸರ್ಜನೆ ಮಾಡಿದ ಮಹೇಶ್ವರ್ ರೌಟ್ರಾಯ್ ಮೇಲೆ ಗುಂಡು ಹಾರಿಸಿದ ಹೋಮಿಯೋಪತಿ ಕ್ಲಿನಿಕ್ ನ ವೈದ್ಯ ಬಿಸ್ವಭೂಷನ್ ಪ್ರಧಾನ್ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. 
ಮಹೇಶ್ವರ್ ಕಾಲಿಗೆ ಪ್ರಧಾನ್ ಗುಂಡು ಹಾರಿಸುತ್ತಿದ್ದಂತೆ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಬಳಿಕ ಮಹೇಶ್ವರ್ ಸ್ಥಿತಿ ಸುಧಾರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ವೈದ್ಯ ಬಿಸ್ವಭೂಷಣ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಸ್ವಭೂಷಣ್ ಅವರು ಮಾನಸಿಕವಾಗಿ ಅಸ್ಥಿರವಾಗಿದ್ದಾರಾ ಎಂದು ಪರೀಕ್ಷಿಸುತ್ತಿದ್ದಾರೆ. 
ವೈದ್ಯ ಬಿಸ್ವಭೂಷಣ್ ವಿರುದ್ಧ ಭಾರತೀಯ ದಂಡ ಸಂಹಿತೆ 326, 307ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com