ಶಂಕಿತ ಉಗ್ರರಿಗೆ ಕಾನೂನು ನೆರವು: ಓವೈಸಿ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ

ಶಂಕಿತ ಉಗ್ರರಿಗೆ ಕಾನೂನು ನೆರವು ನೀಡಲು ಮುಂದಾಗಿದ್ದ ಎಂಐಎಂ ಮುಖಂಡ ಅಸಾವುದ್ದೀನ್ ಓವೈಸಿ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗಿದೆ.
ಓವೈಸಿ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ
ಓವೈಸಿ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ

ಹೈದರಾಬಾದ್: ಹೈದರಾಬಾದ್ ನಲ್ಲಿ ಎನ್ಐಎ ತಂಡದಿಂದ ಬಂಧನಕ್ಕೊಳಗಾಗಿದ್ದ ಶಂಕಿತ ಉಗ್ರರಿಗೆ ಕಾನೂನು ನೆರವು ನೀಡಲು ಮುಂದಾಗಿದ್ದ ಎಂಐಎಂ ಮುಖಂಡ ಅಸಾವುದ್ದೀನ್ ಓವೈಸಿ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗಿದೆ.

ಖಾಸಗಿ ದೂರನ್ನು ಪರಿಗಣಿಸಿ ಹೈದರಾಬಾದ್ ನ ನ್ಯಾಯಾಲಯ ಓವೈಸಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಸರೂರ್ ನಗರ್  ನ ಪೊಲೀಸ್ ಠಾಣೆಗೆ ಸೂಚನೆ ನೀಡಿದೆ. ಕೋರ್ಟ್ ನ ಸೂಚನೆಯಂತೆ ಪೊಲೀಸ್ ಠಾಣೆಯಲ್ಲಿ ಅಸಾವುದ್ದೀನ್ ಓವೈಸಿ ವಿರುದ್ಧ ಸೆಕ್ಷನ್ 124 ಎ ಪ್ರಕಾರ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಕೆ.ಕರುಣಾ ಸಾಗರ್ ಎಂಬ ವಕೀಲರು ಅಸಾವುದ್ದೀನ್ ಓವೈಸಿ ಶಂಕಿತ ಉಗ್ರರಿಗೆ ಕಾನೂನು ನೆರವು ನೀಡುವ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಸೂಚನೆ ಮೇರೆಗೆ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿರುವ ಉಪ ಆಯುಕ್ತ ತಫ್ಜಿರ್ ಇಕ್ಬಾಲ್, ತನಿಖೆ ನಂತರ ಕೋರ್ಟ್ ಗೆ ವಿಸ್ತೃತ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಶಂಕಿತ ಉಗ್ರರಿಗೆ ಕಾನೂನು ನೆರವು ನೀಡುವ ಮೂಲಕ ಅಸಾವುದ್ದೀನ್ ಓವೈಸಿ ಪರೋಕ್ಷವಾಗಿ ಇಸೀಸ್ ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ವಕೀಲರು ವಾದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com