ಖಾಡ್ಸೆ - ದಾವೂದ್ ನಡುವೆ ಫೋನ್ ಸಂಭಾಷಣೆ ನಡೆದಿಲ್ಲ: ಹೈಕೋರ್ಟ್ ಗೆ ಎಟಿಎಸ್

ಮಹಾರಾಷ್ಟ್ರ ಮಾಜಿ ಸಚಿವ ಏಕನಾಥ್ ಖಾಡ್ಸೆ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ನಡುವೆ ಯಾವುದೇ ಫೋನ್...
ದಾವೂದ್- ಏಕನಾಥ್ ಖಾಡ್ಸೆ
ದಾವೂದ್- ಏಕನಾಥ್ ಖಾಡ್ಸೆ
ಮುಂಬೈ: ಮಹಾರಾಷ್ಟ್ರ ಮಾಜಿ ಸಚಿವ ಏಕನಾಥ್ ಖಾಡ್ಸೆ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ನಡುವೆ ಯಾವುದೇ ಫೋನ್ ಸಂಭಾಷಣೆ ನಡೆದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಮಹಾರಾಷ್ಟ್ರ ಉಗ್ರ ನಿಗ್ರಹ ದಳ(ಎಟಿಎಸ್) ಸೋಮವಾರ ಬಾಂಬೆ ಹೈಕೋರ್ಟ್ ಗೆ ತಿಳಿಸಿದೆ.
ದಾವೂದ್ ಇಬ್ರಾಹಿಂ ಪಾಕ್ ನಿಂದ ಮಹಾರಾಷ್ಟ್ರದ ಬಿಜೆಪಿ ಮುಖಂಡ, ಮಾಜಿ ಕಂದಾಯ ಸಚಿವ ಏಕನಾಥ್ ಖಾಡ್ಸೆ ಅವರ ಮೊಬೈಲ್ ಗೆ ಅತೀ ಹೆಚ್ಚು ಬಾರಿ ಕರೆ ಮಾಡಿದ್ದಾರೆ ಎಂದು ವಡೋದರಾ ಮೂಲದ ಹ್ಯಾಕರ್ ಮನೀಶ್ ಭಂಗಲೆ ಅವರು ಆರೋಪಿಸಿದ್ದರು.
ಹ್ಯಾಕರ್ ಆರೋಪದ ಬಗ್ಗೆ ಎಟಿಎಸ್ ಪ್ರಾಥಮಿಕ ತನಿಖೆ ನಡೆಸಿದ್ದು, ತನಿಖೆಯಲ್ಲಿ ಉಗ್ರರ ನಂಟಿನ ಬಗ್ಗೆ ಮತ್ತು ಖಾಡ್ಸೆ ಹಾಗೂ ದಾವೂದ್ ನಡುವೆ ದೂರವಾಣಿ ಕರೆ ವಿನಿಮಯವಾದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಪತ್ತೆಯಾಗಿಲ್ಲ ಎಂದು ಎಟಿಎಸ್ ವಕೀಲ ನಿತೀನ್ ಪ್ರಧಾನ್ ಅವರು ನ್ಯಾಯಮೂರ್ತಿ ಎನ್.ಎಚ್. ಪಾಟೀಲ್ ಮತ್ತು ಪಿ.ಡಿ.ನಾಯಕ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಭಂಗಲೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಎಟಿಎಸ್ ಈ ಮಾಹಿತಿ ನೀಡಿದೆ.
ದಾವೂದ್ ಇಬ್ರಾಹಿಂನೊಂದಿಗೆ ನಂಟು ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಏಕನಾಥ್ ಖಾಡ್ಸೆ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com