ವಿದ್ಯಾರ್ಥಿನಿ ಮೇಲೆ ಹಲ್ಲೆ: ಕಾಸರಗೋಡಿನಲ್ಲಿ ಎಸ್ಎಫ್ಐ ನ ಮೂವರು ವಿದ್ಯಾರ್ಥಿಗಳ ಅಮಾನತು

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿ ಕಾಸರಗೋಡಿನ ಖಾನ್ ಗಢದ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಎಸ್ ಎಫ್ಐ ಸಂಘಟನೆಯ ಮೂವರು ಕಾರ್ಯಕರ್ತರೂ ಆಗಿದ್ದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.
ಎಸ್ಎಫ್ಐ ನ ಮೂವರು ವಿದ್ಯಾರ್ಥಿಗಳ ಅಮಾನತು
ಎಸ್ಎಫ್ಐ ನ ಮೂವರು ವಿದ್ಯಾರ್ಥಿಗಳ ಅಮಾನತು

ಖಾನ್ ಗಢ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿ ಕಾಸರಗೋಡಿನ ಖಾನ್ ಗಢದ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಎಸ್ ಎಫ್ಐ ಸಂಘಟನೆಯ ಮೂವರು ಕಾರ್ಯಕರ್ತರೂ ಆಗಿದ್ದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.

ಕಿರುಕುಳ ನೀಡಿರುವ ಘಟನೆಯಲ್ಲಿ ಮೂರನೇ ವರ್ಷದ ಬಿಎ ಮಲಯಾಳಂ ವಿದ್ಯಾರ್ಥಿಯಾಗಿರುವ ಶಿಲ್ಪಿ ಚಂದ್ರನ್(20) ಗೆ ಕೈ ಮುರಿದಿದ್ದು, ಹಲ್ಲೆ ನಡೆಸಿದ ಅಜಿತ್ ಹಾಗೂ ಅರುಣ್ ನ್ನು ಕಾಲೇಜಿನ ಪ್ರಾಂಶುಪಾಲರಾದ ಪಿವಿ ಪುಷ್ಪಜಾ ಅಮಾನತುಗೊಳಿಸಿದ್ದಾರೆ.  ಆದರೆ ತನ್ನ ಕಾರ್ಯಕರ್ತರು ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿರುವುದನ್ನು ತಳ್ಳಿಹಾಕಿರುವ ಎಸ್ಎಫ್ಐ ಸಂಘಟನೆ ವಿದ್ಯಾರ್ಥಿಗಳನ್ನು ತಪ್ಪು ಮಾಹಿತಿ ಆಧಾರದಲ್ಲಿ ಅಮಾನತುಗೊಳಿಸಲಾಗಿದೆ ಎಂದು ಹೇಳಿದೆ.

ಎಸ್ಎಫ್ಐ ನ ಸದಸ್ಯನಾಗಿರುವ ಶಿಬಿನ್ ಎಂಬಾತ ವಿದ್ಯಾರ್ಥಿನಿಯರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಬಗ್ಗೆ ಕಾಲೇಜಿನ 21 ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ವಿದ್ಯಾರ್ಥಿನಿಯರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪುಷ್ಪಜಾ ಶಿಬಿನ್ ನ್ನು ಅಮಾನತುಗೊಳಿಸಿದ್ದರು. ಶಿಬಿನ್ ನನ್ನ ಅಮಾನತುಗೊಳಿಸಿರುವುದನ್ನು ವಿರೋಧಿಸಿದ್ದ ಸಂಘಟನೆಯ ಸಹ ಸದಸ್ಯರಾದ ಅರುಣ್ ಹಾಗೂ ಅಜಿತ್, ಅಮಾನತುಗೊಳಿಸಿರುವುದನ್ನು ವಾಪಸ್ ಪಡೆಯಬೇಕೆಂದು ಪ್ರತಿಭಟನೆ ನಡೆಸಿದ್ದೂ ಅಲ್ಲದೇ ದೂರುದಾರಲ್ಲಿ ಒಬ್ಬರಾದ ಶಿಲ್ಪಾ ಚಂದ್ರನ್ ನ್ನು ದೂರು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು. ಆದರೆ ದೂರು ನೀಡಲು ಶಿಲ್ಪಾ ಒಪ್ಪದೇ ಇದ್ದ ಕಾರಣ ಕೈಯನ್ನು ತಿರುಚಿದ್ದಾರೆ. ಪರಿಣಾಮ ಆಕೆಯ ಕೈ ಮೂಳೆ ಮುರಿದಿದೆ. ಈ ಘಟನೆ ನಡೆಯುತ್ತಿದ್ದಂತೆಯೇ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com